ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನೇತಾರನ ಹೇಳಿಕೆ : ವಿಧಾನಸಭೆಯಲ್ಲಿ ವಿರೋಧಪಕ್ಷ ಸದ್ದುಗದ್ದಲ; ಅಧಿವೇಶನ ಮುಂದೂಡಿಕೆ

ತಿರುವನಂತಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಗುಂಡಿನ ದಾಳಿ ನಡೆಸಬೇಕೆಂದು ಟಿವಿ ವಾಹಿನಿ ಚರ್ಚೆ ವೇಳೆ ಕೇರಳದ ಬಿಜೆಪಿ ನಾಯಕ  ಪ್ರಿಂಟು ಮಹಾದೇವನ್ ಹೇಳಿಕೆ ನೀಡಿದ್ದರೆಂದೂ ಆದ್ದರಿಂದ  ಅವರ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು ಮಾತ್ರವಲ್ಲ ಸದನದ ಇಂದಿನ ಕಲಾಪಗಳನ್ನೆಲ್ಲಾ ಬದಿಗಿರಿಸಿ ಆ ವಿಷಯದಲ್ಲಿ ಸಮಗ್ರ ಚರ್ಚೆ ನಡೆಸಬೇಕೆಂದು ಆಗ್ರಹಿಸಿ  ಕಾಂಗ್ರೆಸ್ ರಾಜ್ಯಾಧ್ಯಕ್ಷ ಸನ್ನಿ ಜೋಸೆಪ್ ಇಂದು ಬೆಳಿಗ್ಗೆ ಸದನದಲ್ಲ್ಲಿ ತುರ್ತು ಗೊತ್ತುವಳಿ ಮಂಡಿಸಿದರು ಆದರೆ ಇದು ಸುದ್ದಿ ವಾಹಿನಿಯಲ್ಲಿ ನೀಡಿದ ಹೇಳಿಕೆ ಯಾಗಿದೆ. ಆದ್ದರಿಂದ ಇದು ತುರ್ತು ಗೊತ್ತುವಳಿ ಮಂಡಿಸಬೇಕಾದ ವಿಷಯ ವಲ್ಲ ಎಂದು ಹೇಳಿ ವಿಧಾನಸಭಾ ಅಧ್ಯಕ್ಷರು ತುರ್ತುಗೊತ್ತುವಳಿ ಮಂಡನೆಗೆ ಅನುಮತಿ ನಿರಾಕರಿಸಿದರು. ಅದನ್ನು ಪ್ರತಿಭಟಿಸಿ ವಿರೋಧಪಕ್ಷದವರು ಸದನದಲ್ಲಿ ಭಾರೀ ಸದ್ದುಗದ್ದಲ ಎಬ್ಬಿಸಿದರು ಮಾತ್ರವಲ್ಲ  ಕೊನೆಗೆ ವಿಧಾನಸಭಾ ಅಧಿವೇಶನವನ್ನು ಬಹಿಷ್ಕರಿಸಿ ಹೊರ ನಡೆದರು. ಸದ್ದುಗದ್ದಲದಿಂದಾಗಿ ಸದನವನ್ನು ಮುಂದುವರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಕೊನೆಗೆ ವಿಧಾನಸಭೆಯ ಇಂದಿನ ಕಾರ್ಯ ಕಲಾಪಗಳನ್ನು ಅಲ್ಲಿಗೇ ಮುಕ್ತಾಯ ಗೊಳಿಸಿ ಅಧಿವೇಶನವನ್ನು ಸೋಮ ವಾರಕ್ಕೆ ಮುಂದೂಡಿದರು.

ಸೆ. ೨೬ರಂದು ಮಲೆಯಾಳಂ ಸುದ್ದಿವಾಹಿನಿಯಲ್ಲಿ ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದ ಪ್ರತಿಭಟನೆಗಳ ಕುರಿತಾದ ಚರ್ಚೆಯಲ್ಲಿ ಭಾಗವ ಹಿಸಿದ ಬಿಜೆಪಿ ನೇತಾರ ಮಹಾದೇ ವನ್ ಭಾರತದಲ್ಲಿ ಇಂತಹ ಪ್ರತಿಭಟನೆ ನಡೆಯಲು ಸಾಧ್ಯವಿಲ್ಲ. ಜನರು ಪ್ರಧಾನಮಂತ್ರಿ ಮೋದಿ ಜತೆಗೆ ಗಟ್ಟಿಯಾಗಿ ನಿಂತಿದ್ದಾರೆ. ಒಂದೊಮ್ಮೆ ರಾಹುಲ್‌ಗಾಂಧಿ ಇಂತಹ ಪ್ರತಿಭಟನೆ ನಿರೀಕ್ಷಿಸಿದಲ್ಲಿ  ಗುಂಡುಗಳು ಅವರ ಎದೆ ಬೇಧಿಸಲಿದೆಯೆಂಬ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದರು.  ಹೀಗೆ  ಹೇಳಿದ ಬಿಜೆಪಿ ನೇತಾರನ ವಿರುದ್ಧ ರಾಜ್ಯಸರಕಾರ ಯಾವುದೇ ರೀತಿಯ ಕಾನೂನುಕ್ರಮ ಕೈಗೊಳ್ಳುತ್ತಿಲ್ಲ ಮಾತ್ರವಲ್ಲದೆ ಅವರನ್ನು ಬಂಧಿಸಲೂ ಮಂದಾಗುತ್ತಿಲ್ಲ. ಇದು ಕೇರಳದಲ್ಲಿ ಸಿಪಿಎಂ ಮತ್ತು ಬಿಜೆಪಿ ಮಾಡಿಕೊಂಡಿ ರುವ ಹೊಂದಾಣಿಕೆ ಯನ್ನು ಬಯಲು ಪಡಿಸುತ್ತಿದೆಯೆಂದು ವಿರೋಧಪಕ್ಷ ದವರು  ವಿಧಾನಸಭೆಯಲ್ಲಿ ಸರಕಾರದ ಮೇಲೆ ವಾಗ್ದಾಳಿ ನಡೆಸಿ ಕೊನೆಗೆ ಸಭಾತ್ಯಾಗ ನಡೆಸಿದರು.

You cannot copy contents of this page