ಯುವತಿ ದೇಹಕ್ಕೆ ಕಿಚ್ಚಿಡುವ ವೇಳೆ ಸುಟ್ಟು ಗಾಯಗೊಂಡ ಯುವಕ ಮೃತ್ಯು

ಕಣ್ಣೂರು: ಯುವತಿಯ ದೇಹಕ್ಕೆ  ಪೆಟ್ರೋಲ್ ಸುರಿದು ಕಿಚ್ಚಿಡುವ ವೇಳೆ ಸುಟ್ಟು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕನೂ ಮೃತಪಟ್ಟನು.  ಪೆರುವಳತ್ತ್‌ಪರಂಬು ಕುಟ್ಟಾವು ನಿವಾಸಿ  ಜಿಜೇಶ್ ಎಂಬಾತ ಇಂದು ಮುಂಜಾನೆ ಪರಿಯಾರಂನ  ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟನು.  ಈತಿಂಗಳ 20ರಂದು  ಮಧ್ಯಾಹ್ನ ೨ .೩೦ಕ್ಕೆ ಈತ ಕುಟ್ಟಿಯಾಟೂರು ಉರ್ವಚ್ಚಾಲಿನ ಪ್ರವೀಣ (39) ಎಂಬಾಕೆಯನ್ನು ಪೆಟ್ರೋಲ್ ಸುರಿದು ಕೊಲೆಗೈಯ್ಯಲೆತ್ನಿ ಸಿದ್ದನು. ನೀರು ಕೇಳಿ ಯುವತಿಯ ಮನೆಯೊಳಗೆ ನುಗ್ಗಿದ ಜಿಜೇಶ್ ಆಕೆಯ ದೇಹದ ಮೇಲೆ ಪೆಟ್ರೋಲ್ ಸುರಿದು ಕಿಚ್ಚಿಟ್ಟಿದ್ದನೆನ್ನಲಾ ಗಿದೆ. ಈ ವೇಳೆ ಜಿಜೇಶ್ ಕೂಡಾ ಸುಟ್ಟು ಗಾಯಗೊಂಡಿದ್ದನು. ಗಂಭೀರ ಸುಟ್ಟು ಗಾಯಗೊಂಡ ಪ್ರವೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಳು. 

You cannot copy contents of this page