ಪೆರ್ಲ: ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಅಡ್ಕಸ್ಥಳ ಬಳಿಯ ರಾಮಜ್ಜಗುರಿ ನಿವಾಸಿ ಯುವತಿ ಅಸೌಖ್ಯ ಬಾಧಿಸಿ ನಿಧನ ಹೊಂದಿದರು. ಇಲ್ಲಿನ ರಾಧಾಕೃಷ್ಣರೈ- ನಳಿನಿ ದಂಪತಿ ಪುತ್ರಿ ಮಯೂರಿ (26) ನಿಧನ ಹೊಂದಿದ ಯುವತಿ. ಇವರು ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರಿನಿಂದ ಊರಿಗೆ ಹಿಂತಿರುಗಿದ್ದರು. ಶನಿವಾರ ಜ್ವರ ಉಲ್ಬಣಗೊಂಡು ಇವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು. ಮೃತರು ತಂದೆ, ತಾಯಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
