ಕುಂಬಳೆಯ ಟೂರಿಸ್ಟ್ ಹೋಟೆಲ್ ಮಾಲಕ ನಿಧನ

ಕುಂಬಳೆ:  ಕುಂಬಳೆಯ ಟೂರಿಸ್ಟ್ ಹೋಟೆಲ್ ಮಾಲಕನೂ ರೈಲ್ವೇ ನಿಲ್ದಾಣ ಸಮೀಪ ನಿವಾಸಿಯಾದ ಅಬ್ಬಾಸ್ ನಡುತ್ತೋಪ್ (74) ನಿಧನ ಹೊಂದಿ ದರು. ಅಸೌಖ್ಯ ಬಾಧಿಸಿದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ರಾತ್ರಿ 8 ಗಂಟೆ ವೇಳೆ ಕಾಸರಗೋಡಿನ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಮೃತರು ಪತ್ನಿ ಬದರುನ್ನೀಸ, ಮಕ್ಕಳಾದ ಸಬಾನ, ಸಬೀನ, ಶಫೀಕ್, ಸವಾದ್, ಸೈದಿ, ಮಾಹಿನ್ ಶಾದು, ಅಳಿಯ -ಸೊಸೆಯಂದಿರಾದ  ಅಮೀರ್, ಸಮೀರ್, ಸಾಹಿದ, ಸಹೋದರ-ಸಹೋದರಿಯರಾದ ಅಲೀಮ, ಸೈನುದ್ದೀನ್, ಹಮೀದ್, ಖಾಲಿದ್, ರಹೀಂ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page