ಕಾಸರಗೋಡು: ಪಂಚಾಯತ್ ಡೆಪ್ಯುಟಿ ಡೈರೆಕ್ಟರ್ ಕಚೇರಿಯ ನೌಕರ ಹೃದಯಾಘಾ ತದಿಂದ ನಿಧನ ಹೊಂದಿದರು. ತೆರುವತ್ ನಿವಾಸಿ ಸಜಿತ್ ಕುಮಾರ್ (44) ಮೃತಪಟ್ಟವರು. ನ್ಯುಮೋನಿಯಾ ತಗಲಿ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಅವಿವಾಹಿತನಾಗಿದ್ದಾರೆ. ಮೃತರು ತಂದೆ ಕೆ. ಪುರುಷೋತ್ತಮ, ತಾಯಿ ಬೇಬಿ, ಸಹೋದರರಾದ ವಿ.ವಿ. ಅಜಿತ್ ಕುಮಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
