ಪಂಚಾಯತ್ ಚುನಾವಣೆ: ಕುಂಬಳೆಯಲ್ಲಿ ಲೀಗ್‌ಗೆ ಬಹುಮತ ಲಭಿಸಿದರೆ ಅಧ್ಯಕ್ಷ ಯಾರು? ಚರ್ಚೆ ಬಿರುಸು

ಕುಂಬಳೆ: ರಾಜ್ಯದಲ್ಲಿ ಸ್ಥಳೀಯಾ ಡಳಿತ ಚುನಾವಣೆ ಶೀಘ್ರ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ  ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಇದೇ ವೇಳೆ ಕೆಲವು ಪಂಚಾಯತ್‌ಗಳಲ್ಲಿ ತಮ್ಮ ಪಕ್ಷಕ್ಕೆ ಬಹುಮತ ಲಭಿಸಿದರೆ  ಅಧ್ಯಕ್ಷರು ಯಾರಾಗಿರಬಹುದು ಎಂಬ ಲೆಕ್ಕಾಚಾರ ದಲ್ಲೂ ನೇತಾರರು ತೊಡಗಿಕೊಂಡಿ ದ್ದಾರೆ. ಅದೇ ರೀತಿ ಕುಂಬಳೆ ಪಂಚಾ ಯತ್‌ನಲ್ಲೂ ಮುಸ್ಲಿಂ ಲೀಗ್‌ಗೆ, ಯುಡಿಎಫ್‌ಗೆ ಬಹುಮತ ಲಭಿಸಿದರೆ  ಪಂಚಾಯತ್ ಅಧ್ಯಕ್ಷ ಯಾರಾಗಿರ ಬಹುದು  ಎಂದು ಪರಿಶೀಲಿಸುವ ಮೊದಲೇ ಕಾರ್ಯಕರ್ತರು ಈ ಬಗ್ಗೆ  ಪ್ರಶ್ನೆಗಳನ್ನು ಮುಂದಿಡತೊಡಗಿದ್ದಾರೆ. ಎ.ಕೆ ಆರಿಫ್ ಅಲ್ಲದೆ  ಬೇರೆ ಯಾರು ಅರ್ಹರು?  ಇಂತಹ ಪ್ರಶ್ನೆಯ ಬೆನ್ನಲ್ಲೇ ಇನ್ನು ಕೆಲವರು ಪ್ರಶ್ನಿಸಿದ್ದಾರೆ:  ಎಂ.ಪಿ ಖಾಲಿದ್ ಆದರೇನು? ಇವರಲ್ಲದೆ  ಬೇರೆ ಯಾರೂ ಅರ್ಹರು ಕುಂಬಳೆಯಲ್ಲಿಲ್ಲವೇ? ಎಂಬ ಪ್ರಶ್ನೆ ಕೂಡಾ ಮತ್ತೊಂದು ಭಾಗದಿಂದ ಕೇಳಿ ಬರತೊಡಗಿದೆಯೆಂದು ವರದಿಯಾಗಿದೆ.

ಹಲವು ವರ್ಷಗಳಿಂದ ಆರಿಕ್ಕಾಡಿ, ಬಂಬ್ರಾಣ, ಉಳುವಾರು ಎಂಬಿಡೆಗಳಲ್ಲಿ ರುವವರೇ ಪಂಚಾ ಯತ್ ಅಧ್ಯಕ್ಷರಾ ಗುತ್ತಿದ್ದಾರೆಂಬ ಟೀಕೆಯೂ ಕೇಳಿಬರು ತ್ತಿದೆ. ಈಬಾರಿ ಕುಂಬಳೆಯವರಿಗೆ ಅಥವಾ ಮೊಗ್ರಾಲ್‌ನ ವರಿಗೆ ಅಧ್ಯಕ್ಷ ಸ್ಥಾನ ಲಭಿಸಬೇಕೆಂಬ ಬಗ್ಗೆ ಬೇ ಡಿಕೆಯೂ ತೀವ್ರಗೊಂಡಿದೆ. ಇದೇ ವೇಳೆ ಕೊಯಿಪ್ಪಾಡಿ ವಾರ್ಡ್‌ನಲ್ಲಿರು ವವರೇ ಪಂಚಾಯತ್ ಸದಸ್ಯರಾಗ ಬೇಕೆಂಬ  ಬೇಡಿಕೆ ಕೇಳಿಬಂದಿದೆ. ಈಬಾರಿ ಹಮೀದ್ ಅಥವಾ ಹನೀಫ್ ಸ್ಪರ್ಧಿಸಲಿ ಎಂಬ ಮಾತುಗಳು ಕೇಳಿ ಬರುತ್ತಿವೆ. ವಾರ್ಡ್ ವಿಭಜನೆ ಪ್ರಕ್ರಿಯೆ ಪೂರ್ಣಗೊಂಡಾಗ ಮುಸ್ಲಿಂ ಲೀಗ್‌ಗೆ ಬಹುಮತ ಲಭಿಸಲಿರುವ ಸಾಧ್ಯತೆ ಹೆಚ್ಚಿದೆಯೆಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ವಾರ್ಡ್ ವಿಭಜನೆಯಲ್ಲಿ ಒಂದು ವಾರ್ಡ್ ಹೆಚ್ಚಿದೆ. ಪಂಚಾಯತ್‌ನಲ್ಲಿ 23 ವಾರ್ಡ್‌ಗಳಿದ್ದವು. ಅದೀಗ 24ಕ್ಕೇರಿದೆ. ಅದರಲ್ಲಿ 12 ವಾರ್ಡ್ ಮಹಿಳಾ ಮೀಸಲಾತಿ ವಾರ್ಡ್‌ಗಳಾ ಗಿವೆ. 11 ಜನರಲ್ ವಾರ್ಡ್‌ಗಳಿವೆ. ಕೋಟೆಕ್ಕಾರ್ ವಾರ್ಡ್ ಎಸ್‌ಸಿ ಮೀಸಲಾತಿಯದ್ದಾಗಿದೆ. ಆ ವಾರ್ಡ್‌ನ ಸಂಗತಿಯನ್ನು ಸಿಪಿಎಂ ಹಾಗೂ ಬಿಜೆಪಿ ನೋಡಿಕೊಳ್ಳಲಿವೆಯೆಂದು ಲೀಗ್ ಕಾರ್ಯಕರ್ತರು ಹೇಳುತ್ತಿದ್ದಾರೆ. 11 ಜನರಲ್ ವಾರ್ಡ್‌ಗಳಲ್ಲಿ ಕಕ್ಕಳಂಕುನ್ನು, ಬಂಬ್ರಾಣ, ಕೊಡ್ಯಮ್ಮೆ, ಇಚ್ಲಂಪಾಡಿ, ಮುಳಿಯಡ್ಕ, ಪೇರಾಲ್, ಬದ್ರಿಯಾನಗರ ವಾರ್ಡ್‌ಗಳನ್ನು ಮುಸ್ಲಿಂ ಲೀಗ್ ಕಾರ್ಯಕರ್ತರು ಖಚಿತಪಡಿಸಿ ದ್ದಾರೆ. 12 ಮಹಿಳಾ ಮೀಸಲಾತಿ ವಾರ್ಡ್‌ಗಳಲ್ಲಿ ಕುಂಬೋಲ್, ಆರಿಕ್ಕಾಡಿ, ಊಜಾರ್, ಉಳ್ವಾರ್, ಕೆ.ಕೆ ಪುರ, ಮೊಗ್ರಾಲ್, ಕೊಪ್ಪಳ, ಕುಂಬಳೆ ರೈಲು ನಿಲ್ದಾಣ, ನಡುಪ್ಪಳ್ಳ ವಾರ್ಡ್‌ಗಳು ಲೀಗ್‌ನ ಸ್ವಂತ ವಾರ್ಡ್‌ಗಳಾಗಿವೆ ಯೆಂದು ಕಾರ್ಯಕರ್ತರು ಹೇಳುತ್ತಿ ದ್ದಾರೆ. 24ರಲ್ಲಿ 16 ಸಾಲದೇ? ಸಾಲದಾ ದಲ್ಲಿ ಕಾಂಗ್ರೆಸ್ ವಾರ್ಡ್‌ಗಳೂ ಇವೆ ಯೆಂದು ಯುಡಿಎಫ್ ನಿರೀಕ್ಷೆಯಿರಿ ಸಿದೆ. ಈ ಚುನಾವಣೆಯಲ್ಲಿ ಎಸ್‌ಡಿಪಿಐ 11 ವಾರ್ಡ್‌ಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುತ್ತದೆ.  ಯಾಕಾಗಿ 11ರಲ್ಲಿ ಮಾತ್ರ ಸ್ಪರ್ಧಿಸಬೇಕು? 24 ವಾರ್ಡ್‌ಗ ಳಲ್ಲೂ ಸ್ಪರ್ಧಿಸಬಹುದಲ್ಲವೇ ಎಂಬುದಾಗಿದೆ ಯುಡಿಎಫ್‌ನ ಅಭಿಪ್ರಾಯ ಎನ್ನಲಾ ಗುತ್ತಿದೆ. ಕಳೆದ ಬಾರಿ ಎಸ್‌ಡಿಪಿಐಗೆ ಒಂದು ಸೀಟು ಲಭಿಸಿತ್ತು. ಈಬಾರಿ ಆ ವಾರ್ಡನ್ನು ಉಳಿಸಿಕೊಳ್ಳಲು ಆ ಪಕ್ಷಕ್ಕೆ ಸಾಧ್ಯವಿದೆಯೇ ಎಂದು ಯುಡಿಎಫ್ ಸಂಶಯ ವ್ಯಕ್ತಪಡಿಸಿದೆ. ಕಳೆದ ಚುನಾವಣೆಯಲ್ಲಿ ಇಬ್ಬರು ಸ್ವತಂತ್ರರ ಸಹಿತ ಸಿಪಿಎಂಗೆ ಮೂವರು ಸದಸ್ಯರಿದ್ದರೆಂದೂ ಯುಡಿಎಫ್ ಕಾರ್ಯಕರ್ತರು ಹೇಳುತ್ತಿದ್ದಾರೆ. ಈಬಾರಿ ಕಳತ್ತೂರು ಲಭಿಸಬಹುದೆಂದು ಲೀಗ್ ಕಾರ್ಯಕರ್ತರಿಗೆ ಭರವಸೆ ಯಿದೆ. ಬಳಿಕ ನಾರಾಯಣಮಂಗಲ, ಶೇಡಿಕಾವು, ಶಾಂತಿಪಳ್ಳ, ಮಾಟಂಗುಳಿ ವಾರ್ಡ್‌ಗಳೂ ಇವೆ. ಅದರಲ್ಲಿ ಇತರ ಪಕ್ಷಗಳು ಶಕ್ತಿ ಪ್ರದರ್ಶಿಸಲಿ ಎಂದು ಲೀಗ್ ಕಾರ್ಯಕರ್ತರು ಹೇಳುತ್ತಿದ್ದಾರೆ. ಪಂಚಾಯತ್ ಚುನಾವಣೆಗಿರುವ ಅಧಿಕೃತ ಕ್ರಮಗಳು ಪೂರ್ಣಗೊಳ್ಳುವ ಮೊದಲೇ ನಾಡು ಚುನಾವಣೆಗೆ ಸಿದ್ಧಗೊಂಡಿದೆ. ಇದೇ ಉತ್ಸಾಹವನ್ನು ಆಡಳಿತ-ವಿಪಕ್ಷಗಳು ಇತರ ಪಂಚಾಯತ್‌ಗಳಲ್ಲೂ ಹೊಂದಿವೆ.

You cannot copy contents of this page