ಕುಂಬಳೆ: ಪೇಟೆ ಕೇಂದ್ರೀಕರಿಸಿ ತತ್ಸಮಾನ ಲಾಟರಿ ನಡೆಸುವ ಇಬ್ಬರನ್ನು ಸೆರೆ ಹಿಡಿಯಲಾಗಿದೆ. ಅನಂತಪುರದ ಸತೀಶನ್ (75) ನಾರಾಯಣಮಂಗಲದ ರಾಜೇಶ್ (32) ಎಂಬಿವರನ್ನು ಎಸ್‌ಐ ಪ್ರದೀಪ್ ಕುಮಾರ್ ಬಂಧಿಸಿದ್ದಾರೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸೆರೆಹಿಡಿದ ಪೊಲೀಸ್ ತಂಡದಲ್ಲಿ ಎಸ್‌ಐ ಬಾಬು, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಚಂದ್ರನ್, ಸಿವಿಲ್ ಪೊಲೀಸ್ ಆಫೀಸರ್ ಸುಧೀಶ್ ಸೇರಿದ್ದರು. ಕುಂಬಳೆ ಹಾಗೂ ಪರಿಸರಗಳಲ್ಲಿ ತತ್ಸಮಾನ ಲಾಟರಿ ವ್ಯವಹಾರ ವ್ಯಾಪಕವಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಜಿಜೀಶ್‌ರ ನಿರ್ದೇಶ ಪ್ರಕಾರ ಬಂಧಿಸಲಾಗಿದೆ.
