ಪಾರ್ಲಿಮೆಂಟ್ ಚಲೋ ಮುಷ್ಕರ: ಸಿಐಟಿಯುನಿಂದ ವಾಹನ ಪ್ರಚಾರ ಜಾಥಾಕ್ಕೆ ಚಾಲನೆ

ಮಂಜೇಶ್ವರ: ಡಿಸೆಂಬರ್ 1,2ರಂದು ನಡೆಯುವ ಕಾರ್ಮಿಕ ವಿರೋದಿs ನೀತಿಯ ವಿರುದ್ದ ಪಾರ್ಲಿ ಮೆಂಟ್ ಚಲೋ ಕಾರ್ಯಾಕ್ರಮ ದಂಗವಾಗಿ ಸಿ.ಐ.ಟಿ.ಯು ಜಿಲ್ಲಾ ವಾಹನ ಪ್ರಚಾರ ಜಾಥಾ ಹೊಸಂಗಡಿಯಲ್ಲಿ ನಿನ್ನೆ ಸಂಜೆ ನಡೆಯಿತು. ಸಿ.ಐ.ಟಿ.ಯು ರಾಜ್ಯ ಉಪಾಧ್ಯಕ್ಷ ಟಿ.ಕೆ ರಾಜನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಣಿ ಮೋಹನ್‌ರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಡಿ. ಕಮಲಾಕ್ಷರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿ.ಪಿ.ಪಿ ಮುಸ್ತಪs, ಶೋಭಾ.ಬಿ, ಪಿ.ಎ ಅಬ್ದುಲ್ ರಹಿಮಾನ್, ಇಬ್ರಾಹಿಂ ಪುತ್ತಿಗೆ, ಕರ್ಷಕ ರಾಜ್ಯ ಸಮಿತಿ ಸದಸ್ಯ ಕೆ.ಆರ್.ಜಯಾನಂದ ಉಪಸ್ಥಿತರಿದ್ದರು. ಪ್ರಶಾಂತ್ ಕನಿಲ ಸ್ವಾಗತಿಸಿ, ಟಿ. ನಾರಾಯಣನ್ ವಂದಿಸಿದರು.

RELATED NEWS

You cannot copy contents of this page