ಬಸ್‌ನೊಳಗೆ ಕುಸಿದು ಬಿದ್ದ ಪ್ರಯಾಣಿಕ: ಬಸ್ಸನ್ನು ತಕ್ಷಣ ಆಸ್ಪತ್ರೆಗೆ ತಲುಪಿಸಿ ವ್ಯಕ್ತಿಯ ಜೀವ ರಕ್ಷಿಸಲು ನಡೆಸಿದ ಯತ್ನ ವಿಫಲ

ಕುಂಬಳೆ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎದೆನೋವು ಅನುಭವಗೊಂಡು ಕುಸಿದು ಬಿದ್ದ ವ್ಯಕ್ತಿಯನ್ನು ಅದೇ ಬಸ್‌ನಲ್ಲಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಉಪ್ಪಳ ಕೈಕಂಬದಲ್ಲಿರುವ ಗುಜರಿ ಕೆಲಸ ನಿರ್ವಹಿಸುವ ಕರ್ನಾಟಕದ ಭದ್ರಾವತಿ ಜಫತ್‌ನಗರದ ಫಯಸ್ ಅಹಮ್ಮದ್ (61) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ ಈ ಘಟನೆ ಕುರಿತು ಬಸ್ ನೌಕರರು ಈ ರೀತಿ ತಿಳಿಸುತ್ತಿದ್ದಾರೆ.

ಕಾಸರಗೋಡಿನಿಂದ  ತಲಪಾಡಿಗೆ ನಿನ್ನೆ ಸಂಜೆ ತೆರಳುತ್ತಿದ್ದ ಗಜಾನನ ಬಸ್‌ನಲ್ಲಿ ಫಯಸ್ ಅಹಮ್ಮದ್ ಪ್ರಯಾಣಿಸುತ್ತಿದ್ದರು. ಕಾಸರಗೋಡಿನಿಂದ  ಬಸ್‌ಗೆ ಹತ್ತಿದ ಇವರು ತಲಪಾಡಿಗೆ ಟಿಕೆಟ್ ಪಡೆದಿದ್ದರು. ಬಸ್ ಬಂದ್ಯೋಡಿಗೆ ತಲುಪಿದಾಗ ಕುಳಿತು ಪ್ರಯಾಣಿಸುತ್ತಿದ್ದ ಇವರು ಕುಸಿದು ಬಿದ್ದಿದ್ದಾರೆ. ಕೂಡಲೇ ಚಾಲಕ ಎರಿಯಾಲ್‌ನ ಜಿತಿನ್ ಹಾಗೂ ಕಂಡಕ್ಟರ್ ಅಡ್ಕತ್ತಬೈಲ್‌ನ ಕೆ.ಪಿ. ಪ್ರಣವ್ ಬಸ್ಸನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಇತರ ಯಾವುದೇ ಸ್ಟಾಪ್‌ಗಳಲ್ಲಿ ನಿಲ್ಲಿಸದೆ ಬಸ್‌ನ್ನು ಆಸ್ಪತ್ರೆಗೆ ಕೊಂಡೊಯ್ಯ ಲಾಯಿತು. ಕೆಲವೇ ನಿಮಿಷಗಳಲ್ಲಿ ಬಸ್ ಆಸ್ಪತ್ರೆಗೆ ತಲುಪಿದ್ದು, ಕೂಡಲೇ ಫಯಸ್ ಅಹಮ್ಮದ್‌ರಿಗೆ ತುರ್ತು ಚಿಕಿತ್ಸೆ ನೀಡಲಾ ಯಿತು. ಆದರೂ ಅವರ ಜೀವ ರಕ್ಷಿಸಲಾಗ ಲಿಲ್ಲವೆಂದು ತಿಳಿಸಲಾಗಿದೆ. ವಿಷಯ ತಿಳಿದು ಸಂಬಂಧಿಕರು ಮಂಗಲ್ಪಾಡಿಗೆ ತಲುಪಿದ್ದಾರೆ.

RELATED NEWS

You cannot copy contents of this page