ಪುತ್ತಿಗೆಯಲ್ಲಿ ಬಸ್-ಆಟೋ ರಿಕ್ಷಾ ಢಿಕ್ಕಿ ಗಾಯಗೊಂಡಿದ್ದ ಪ್ರಯಾಣಿಕ ಮೃತ್ಯು

ಕುಂಬಳೆ: ಪುತ್ತಿಗೆಯಲ್ಲಿ ಖಾಸಗಿ ಬಸ್ ಹಾಗೂ ಆಟೋ ರಿಕ್ಷಾ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ಮೃತ ಪಟ್ಟರು.ಅಂಗಡಿಮೊಗರು ಕಮಂದಳ ನಿವಾಸಿ ಕೆ.ಎಸ್. ಮಹಮೂದ್ (74) ಮೃತ ವ್ಯಕ್ತಿಯಾಗಿದ್ದಾರೆ.

ಕಳೆದ ಬುಧವಾರ ಬೆಳಿಗ್ಗೆ ಅಪಘಾತವುಂಟಾಗಿತ್ತು. ಪೆರ್ಲದಿಂದ ಸೀತಾಂಗೋಳಿ ಭಾಗಕ್ಕೆ ತೆರಳುತ್ತಿದ್ದ ಬಸ್ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿತ್ತು.  ಅಪಘಾತದಲ್ಲಿ ಆಟೋ ಚಾಲಕ ಬಾಡೂರು  ಪೆರುನ್ನದ ಕೆ.ಎಚ್. ಅಬ್ದುಲ್ ಅಸೀಸ್ ಹಾಗೂ ಪ್ರಯಾಣಿಕನಾದ ಮಹಮೂದ್ ಗಾಯಗೊಂಡಿದ್ದರು. ಗಂಭೀರ ಗಾಯಗೊಂಡಿದ್ದ ಮಹಮೂದ್‌ರನ್ನು  ಕೂಡಲೇ ಕುಂಬಳೆಯ ಖಾಸಗಿ ಆಸ್ಪತ್ರೆಗೂ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.  ಅನಂತರ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ನಿನ್ನೆ ಮುಂಜಾನೆ ನಿಧನ ಸಂಭವಿಸಿದೆ. ಆಟೋ ಚಾಲಕ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.

ಮೃತ ಮಹಮೂದ್ ಪತ್ನಿ ಕುಂಞಾಮಿನ,  ಮಕ್ಕಳಾದ ಮುಹಮ್ಮದಲಿ, ನವಾಸ್, ನಿಯಾಸ್, ಸಮೀರ,ಸಾಜಿದ,ಇಬ್ರಾಹಿಂ, ಬೀಫಾತ್ತಿಮ, ಮಿಸ್ರಿಯ, ಅಳಿಯ-ಸೊಸೆಯಂದಿರಾದ ತಾಹಿರ, ಹಸೀನ, ಶಾನಿಬ, ಲತೀಫ್, ಅಬ್ದುಲ್ ಅಸೀಸ್, ಸಹೋದರಿಯರಾದ ಬೀಫಾತ್ತಿಮ, ಮರಿಯಂಬಿ, ಆಯಿಶ, ನಬೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇದೇ ವೇಳೆ ಅಪಘಾತದಲ್ಲಿ ಗಾಯಗೊಂಡಿದ್ದ  ಮಹಮೂದ್ ಮೃತಪಟ್ಟ ಹಿನ್ನೆಲೆಯಲ್ಲಿ  ನಿನ್ನೆ ಅಂಗಡಿಮೊಗರು ಖತೀಬ್‌ನಗರದಲ್ಲಿ ನಾಗರಿಕರು  ಬಸ್‌ಗಳಿಗೆ ತಡೆಯೊಡ್ಡಿದ್ದರು.  ವಿಷಯ ತಿಳಿದು ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿ ನಾಗರಿಕರೊಂದಿಗೆ ಚರ್ಚೆ ನಡೆಸಿದರು. ಆದರೆ  ಮೃತರ ಅಂತ್ಯಸಂಸ್ಕಾರ ನಡೆಸುವವರೆಗೆ ಬಸ್ ಸಂಚಾರ ನಡೆಸಕೂಡದೆಂದು ನಾಗರಿಕರು ತಿಳಿಸಿದ್ದರು. ಇದರಿಂದ ಅಂಗಡಿಮೊಗರು-ಖತೀಬ್‌ನಗರ  ರೂಟ್‌ನಲ್ಲಿ ನಿನ್ನೆ ಬಸ್‌ಗಳ ಸಂಚಾರವಿರಲಿಲ್ಲ.

You cannot copy contents of this page