ರಾಣಿಪುರಂ ರಸ್ತೆಯಲ್ಲಿ ಕಾರುಗಳು ಮಗುಚಿ ಪ್ರಯಾಣಿಕರಿಗೆ ಗಾಯ

ಕಾಸರಗೋಡು: ರಾಣಿಪುರಂ ರಸ್ತೆಯ ನೆಲ್ಲಿತ್ತೋಡ್ ಭಾಗದಲ್ಲಿ ಕಾರುಗಳು ಮಗುಚಿ ಬಿದ್ದು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅರ್ಧ ಗಂಟೆಯ ಮಧ್ಯಂತರದಲ್ಲಿ ಎರಡು ಅಪಘಾತಗಳು ಸಂಭವಿಸಿವೆ. ನಿನ್ನೆ ಮಧ್ಯಾಹ್ನ ೩ ಗಂಟೆಗೆ ಮೊದಲ ಅಪಘಾತ ನಡೆದಿದ್ದು, ಕಾಞಂಗಾಡ್ ನಿವಾಸಿಗಳಾದ ಸ್ವಿಪ್ಟ್ ಕಾರ್ ನಿಯಂತ್ರಣ ತಪ್ಪಿ ಮುಂಭಾಗದಲ್ಲಿದ್ದ ತಡೆಗೋಡೆಗೆ ಢಿಕ್ಕಿ ಹೊಡೆದಿದೆ.

ಇದಾದ  ಅರ್ಧ ಗಂಟೆ ಬಳಿಕ ಅರ್ಧ ಕಿಲೋ ಮೀಟರ್ ದೂರದಲ್ಲಿ ಕರ್ನಾಟಕ ನೋಂದಾವಣೆಯ ಎರ್ಟಿಗ ಕಾರು ರಸ್ತೆ ಬದಿಯ ಬರೆಗೆ ಢಿಕ್ಕಿ ಹೊಡೆದ ಬಳಿಕ ರಸ್ತೆಗೆ ಪಲ್ಟಿಯಾಗಿದೆ. ಕಾರುಗಳು ಸಂಪೂರ್ಣವಾಗಿ ಹಾನಿಗೊಂಡಿವೆ. ಗಾಯಗೊಂ ಡವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕೊಂಡೊ ಯ್ಯಲಾಗಿದೆ.  ಅಪರಿಮಿತ ವೇಗ ಹಾಗೂ ಚಾಲಕರ ಅಜಾಗರೂಕತೆ ಅಪಘಾತಕ್ಕೆ ಕಾರಣವೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.

You cannot copy contents of this page