ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಕುಂಬ್ಡಾಜೆ ಘಟಕ ವತಿಯಿಂದ ಪಿಂಚಣಿದಾರರ ದಿನಾಚರಣೆ ನಡೆಸಲಾಯಿತು. ನಿವೃತ್ತ ಡೆಪ್ಯುಟಿ ತಹಶೀಲ್ದಾರ್ ಶ್ರೀಕೃಷ್ಣ ಭಟ್‌ರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಪ್ರಾಂತ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಈಶ್ವರ ರಾವ್, ಜಿಲ್ಲಾ ಸಮಿತಿ ಸದಸ್ಯ ಶ್ರೀಧರ ಭಟ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಸೀತಾರಾಮ ರಾವ್, ಬ್ಲೋಕ್ ಸಮಿತಿ ಸದಸ್ಯ ವೆಂಕಟ್ರಮಣ ಕೆದಿಲ್ಲಾಯ, ಪಂಚಾಯತ್ ಸಮಿತಿ ಕಾರ್ಯದರ್ಶಿ ವಿಷ್ಣು ಭಟ್ ಕುಂಬ್ಡಾಜೆ, ಜಿಲ್ಲಾ ಸಮಿತಿ ಸದಸ್ಯ ಸೀತಾರಾಮ ಭಟ್ ಉಪಸ್ಥಿತರಿದ್ದರು. ಬ್ಲೋಕ್ ಸಮಿತಿ ಅಧ್ಯಕ್ಷ ಸೂರ್ಯನಾರಾ ಯಣ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಕೃಷ್ಣೋಜಿ ರಾವ್ ವಂದಿಸಿದರು.







