ಮಂಜೇಶ್ವರ: ಬೀದಿ ನಾಯಿಗಳ ದಾಳಿಯಿಂದ ಸಂಕಷ್ಟವನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮಂಜೇ ಶ್ವರದ ಜನತೆ ಗುರುವಾರ ಪಂಚಾ ಯತ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಸಮಸ್ಯೆಯ ಬಗ್ಗೆ ವರ್ಷಗಳ ಹಿಂದೆಯೇ ಹಲವಾರು ಬಾರಿ ದೂರು ನೀಡಿದರೂ ಕೂಡ ಕ್ರಮ ಕೈಗೊಳ್ಳದೆ ಇದ್ದ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಬೆಳಿಗ್ಗೆ ಮಂಜೇಶ್ವರ ರಿಜಿಸ್ಟ್ರಾರ್ ಕಚೇರಿ ಪರಿಸರದಿಂದ ಆರಂಭವಾದ ಪ್ರತಿ ಭಟನಾ ಮೆರವಣಿಗೆ, ಘೋಷಣೆ ಗಳೊಂದಿಗೆ ಕಚೇರಿ ಕಡೆಗೆ ಸಾಗಿತು. ನಂತರ ಪಂಚಾಯತ್ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಾ ಕಾರರು ಧರಣಿ ನಡೆಸಿದರು. ಪ್ರತಿ ರಾತ್ರಿ ಬೀದಿ ನಾಯಿಗಳ ಗುಂಪುಗಳು ಮಕ್ಕಳಿಗೆ, ಪಾದಚಾರಿಗಳಿಗೆ, ಸೈಕಲ್, ಬೈಕ್ ಓಡಿಸುವವರಿಗೆ ತೀವ್ರ ಅಡಚಣೆ ಉಂಟು ಮಾಡುತ್ತಿವೆ. ಕೆಲವು ಬಾರಿ ಗಂಭೀರ ಗಾಯಗಳಿಗೂ ಕಾರಣ ವಾಗಿದೆ. ಇದನ್ನು ಪಂಚಾಯತ್ ಗಮನಕ್ಕೆ ತಂದಿದ್ದರೂ ಕ್ರಮವಿಲ್ಲ ಎಂದು ಪ್ರತಿಭಟನಾ ನಿರತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪಂಚಾಯತ್ ಅಧಿಕಾರಿಗಳು ಹಲವಾರು ಬಾರಿ ಆಶ್ವಾಸನೆ ನೀಡಿದ್ದಲ್ಲದೆ ಅದು ಕೇವಲ ಮಾತುಗಳಿಗೆ ಮಾತ್ರ ಸೀಮಿತವಾಗಿದೆ. ಈ ಬಾರಿ ಸಮಸ್ಯೆಗೆ ತಕ್ಷಣ ಪರಿಹಾರ ಕೊಡದಿದ್ದರೆ ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಲಿ ದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು. ಅಬ್ದುಲ್ ರಹ್ಮಾನ್ ಹಾಜಿ, ಪ್ರಶಾಂತ್ ಕನಿಲ, ಕರುಣಾಕರ ಶೆಟ್ಟಿ, ಹನೀಫ್, ಜಬ್ಬಾರ್, ಬಾಸಿತ್, ಮುಬಾರಕ್, ಮೂಸ ರಫೀಕ್ ಮೊದಲಾದವರು ನೇತೃತ್ವ ನೀಡಿದರು.
