ಜ್ವರ ಬಾಧಿಸಿ ವ್ಯಕ್ತಿ ಮೃತ್ಯು

ಕಾಸರಗೋಡು: ಜ್ವರಬಾಧಿಸಿ ಆಸ್ಪತ್ರೆಯಲ್ಲಿ  ದಾಖಲಾಗಿದ್ದ ವ್ಯಕ್ತಿ ಮೃತಪಟ್ಟರು. ಕಾಸರಗೋಡು ಕಸಬ ಬೀಚ್‌ನ ಕೆ. ಶ್ರೀಧರನ್ (68) ಎಂಬವರು ಮೃತಪಟ್ಟ ವ್ಯಕ್ತಿ. ಇವರು ನೆಲ್ಲಿಕುಂಜೆಯ ಜೀನಸು ಅಂಗಡಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಜ್ವರ ಬಾಧಿಸಿದ್ದ ಇವರನ್ನು ಈ ತಿಂಗಳ ೧ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ.

ದಿವಂಗತರಾದ ಕೃಷ್ಣನ್-ಲಕ್ಷ್ಮಿ ದಂಪತಿಯ ಪುತ್ರನಾದ ಮೃತರು ಪತ್ನಿ ಸವಿತ, ಮಕ್ಕಳಾದ ಶ್ರಿತ್, ಚರಣ್‌ಜಿತ್, ಸಹೋದರ-ಸಹೋದರಿಯರಾದ ರಾಜನ್, ದಾಮು, ಪ್ರೇಮ, ಬೇಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page