ರೈಲು ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ಕಳವು: ಗಲ್ಫ್‌ಗೆ ಪರಾರಿಯಾದ ಆರೋಪಿ ಕಣ್ಣೂರಿನಿಂದ ಸೆರೆ

ಕುಂಬಳೆ: ಕುಂಬಳೆ ರೈಲು ನಿಲ್ದಾಣ ಸಮೀಪ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ಕಳವುಗೈದ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಯುವಕನನ್ನು ಕಣ್ಣೂರು ವಿಮಾನ ನಿಲ್ದಾಣದಿಂದ ಸೆರೆ ಹಿಡಿಯಲಾಗಿದೆ. ಮೇಲ್ಪರಂಬ ನಿವಾಸಿ ರಿಸ್ವಾನ್ (23) ಎಂಬಾತ ಬಂಧಿತ ಆರೋಪಿಯಾಗಿ ದ್ದಾ ನೆಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಜುಲೈ 13ರಂದು ಕುಂಬಳೆ ರೈಲು ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ ಬೈಕ್‌ನಿಂದ ರಿಸ್ವಾನ್ ಹಾಗೂ ಕುಂಬಳೆ ನೀರೋಳಿಯ ರುಮೈಸ್ ಎಂಬವರು ಪೆಟ್ರೋಲ್ ಕಳವುಗೈದಿದ್ದರು. ಕಳವುಗೈಯ್ಯುತ್ತಿರು ವುದನ್ನು ತಿಳಿದ ವಾಹನ ಪಾರ್ಕಿಂಗ್ ಸ್ಥಳದ ಕಾವಲುಗಾರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಅಲ್ಲಿಗೆ ತಲುಪಿದ ಪೊಲೀಸರು ರುಮೈಸ್‌ನನ್ನು ಬಂಧಿಸಿದ್ದರು. ಈ ವೇಳೆ ರಿಸ್ವಾನ್ ಓಡಿ ಪರಾರಿಯಾಗಿದ್ದನು.  ಬಳಿಕ ಪೊಲೀಸರು ನಡೆಸಿದ ತನಿಖೆಯಲ್ಲಿ ಈತ ಗಲ್ಫ್‌ಗೆ ಪರಾರಿಯಾಗಿ ರುವುದಾಗಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಈತನ ವಿರುದ್ಧ ಪೊಲೀಸರು ಲುಕೌಟ್ ನೋಟೀಸ್ ಹೊರಡಿಸಿದ್ದರು. ಈ ಮಧ್ಯೆ ನಿನ್ನೆ ರಾತ್ರಿ 1 ಗಂಟೆ ವೇಳೆಗೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ತಲುಪಿದ ವಿಮಾನದಲ್ಲಿ ಈತ ಗಲ್ಫ್‌ನಿಂದ ಬಂದಿದ್ದನು. ಈ ವೇಳೆ ವಿಮಾನ ನಿಲ್ದಾಣದ ಅಧಿಕಾರಿಗಳು ಈತನನ್ನು ಹಿಡಿದಿಟ್ಟು ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಎಸ್‌ಐ ಪ್ರದೀಪ್ ಕುಮಾರ್ ಹಾಗೂ ತಂಡ ಕಣ್ಣೂರಿಗೆ ತೆರಳಿ ಆರೋಪಿಯನ್ನು ಬಂಧಿಸಿ ಕುಂಬಳೆಗೆ ಕರೆದುಕೊಂಡು ಬಂದಿದೆ.

ಈತನನ್ನು ತನಿಖೆಗೊಳಪಡಿಸಿದ ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page