ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಷನ್ ವೆಸ್ಟ್ ಯೂನಿಟ್‌ನ ವತಿಯಿಂದ ಓಣಂ ಪ್ರಯುಕ್ತ ಯೂನಿಟ್ ಸದಸ್ಯ ರಿಗೆ ಉಡುಪು ವಿತರಿಸಲಾಯಿತು. ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಇವರು ಸದಸ್ಯೆ ಶಾಲಿನಿ ರಾಜೇಂ ದ್ರನ್‌ರಿಗೆ ಓಣಂ ಉಡುಪು ನೀಡಿ ಕಾರ್ಯಕ್ರಮ ಉದ್ಘಾಟಿಸಿದರು. ಯೂನಿಟ್‌ನ ಹಿರಿಯ ಸದಸ್ಯ ಪ್ರಕಾಶ್ ಸ್ಟುಡಿಯೋ ಮಾಲಕ ಜಯಪ್ರಕಾಶ್ ಅವರಿಗೆ ಯೂನಿಟ್ ನೀರೀಕ್ಷಕ ಶ್ರೀಜಿತ್ ಓಣಂ ಉಡುಪು ನೀಡಿದರು.
ಈ ಸಂದರ್ಭದಲ್ಲಿ ಎಕೆಪಿಎ ಜಿಲ್ಲಾ ಸ್ಪೊರ್ಟ್ಸ್ ಕೋಓರ್ಡಿನೇಟರ್ ರತೀಶ್ ರಾಮು, ವಲಯ ಕೋಶಾ ಧಿಕಾರಿ ಮನು ಎಲ್ಲೋರ, ವಲಯ ಸಮಿತಿ ಸದಸ್ಯ ಸುಬ್ರಹ್ಮಣ್ಯ ಎಂ.ಎಸ್, ಮೈಂದಪ್ಪ, ಜತೆ ಕಾರ್ಯದರ್ಶಿ ಅಭಿಷೇಕ್ ಸಿ, ಪಿಆರ್ ಒ ವಾಸು.ಎ, ಸಮಿತಿ ಸದಸ್ಯ ಚಂದ್ರಶೇಖರ ಎಂ, ಯೂನಿಟಿನ ಹಿರಿಯ ಸದಸ್ಯರಾದ, ಕೃಷ್ಣ ಎಲ್ಲೋರ, ನಾರಾಯಣನ್ ಟಿ, ರಹ್ ಮಾನ್ ಚೆಮ್ನಾಡ್ ಸದಸ್ಯರು ಗಳಾದ ದಿನೇಶ್ ಕಲ್ಲಂಗಾಯಿ, ವಿನೋದ್ ಕಲ್ಲಂಗಾಯಿ, ದೀಪ್ತ್ ಎಲ್ಲೋರ, ಚರಣ್ ರಾಜ್, ಸಂತೋಷ್ ತ್ರಿದಳ್, ಜಯಕೃಷ್ಣ, ವಿಘ್ನೇಶ್ ಬಿ, ದೀಪಕ್, ಪದ್ಮನಾಭನ್ ದೇಳಿ, ಮಹಿಳಾ ಸದಸ್ಯೆಯರಾದ ಶೈಲಜಾ ಪದ್ಮನಾಭ, ಸಂಧ್ಯಾ ಶೈಲೇಶ್, ಅನುರಾಧಾ ಚಂದ್ರಶೇಖರ, ಉಪಸ್ಥಿತರಿದ್ದರು. ಯುನಿಟ್ ಕಾರ್ಯ ದರ್ಶಿ ವಿಶಾಖ್ ಸ್ವಾಗತಿಸಿ ಕೋಶಾಧಿ ಕಾರಿ ಗಣೇಶ್ ರೈ ವಂದಿಸಿದರು.
