ಹೊಸದುರ್ಗ: ಸ್ಕೂಟರ್‌ಗೆ ಪಿಕಪ್ ವ್ಯಾನ್ ಢಿಕ್ಕಿ ಹೊಡೆದು ಯುವಕ ಮೃತಪಟ್ಟ ಘಟನೆ ಪಯ್ಯನ್ನೂರಿನಲ್ಲಿ ಸಂಭವಿಸಿದೆ. ತೃಕರಿಪುರ ಸೌತ್ ಕಕ್ಕುನ್ನಂ ನಿವಾಸಿ ಕೆ. ಕುಂಞಿಕಣ್ಣನ್ ಎಂಬವರ ಪುತ್ರ ಸುಕೇಶ್ (38)ಮೃತಪಟ್ಟ ದುರ್ದೈವಿ. ನಿನ್ನೆ ರಾತ್ರಿ 11.45ರ ವೇಳೆ ಪಯ್ಯನ್ನೂರು ಮೀನಾ ಬಜಾರ್‌ನಲ್ಲಿ ಅಪಘಾತ ಸಂಭವಿಸಿದೆ. ಸ್ನೇಹಿತ ನೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಗಂಭೀರ ಗಾಯ ಗೊಂಡ ಸುಕೇಶ್‌ರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಮೃತರು ತಾಯಿ ದೇವಕಿ, ಸಹೋದರ ರತೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.