ಕಾಸರಗೋಡು: ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯಂಗ ವಾಗಿ, ಡಿಸೆಂಬರ್ 12 ರಿಂದ 15 ರವರೆಗೆ ವಿಮಾನಗಳು ಕೆಳ ಮಟ್ಟದಲ್ಲಿ ಹಾರಾಟ ನಡೆಸಲಿವೆ. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ವಯನಾಡ್ ಜಿಲ್ಲೆಗಳು ಮತ್ತು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಮತ್ತು ಮಡಿಕೇರಿಯ ಗಡಿ ಪ್ರದೇಶದಲ್ಲಿ ವಿಮಾನ ಕೆಳಮಟ್ಟದಲ್ಲಿ ಹಾರಾಟ ನಡೆಸಲಿದೆ. ಭೂಮಿಯ ಹೊರಪದರದ ಅಡಿಯಲ್ಲಿ ಖನಿಜ ನಿಕ್ಷೇಪಗಳನ್ನು ಕಂಡುಹಿಡಿಯಲು ಈ ವೈಮಾನಿಕ ಸಮೀಕ್ಷೆ ನಡೆಸ ಲಾಗುತ್ತಿದೆ. ವಿಮಾನವು ಕೆಳಮಟ್ಟಕ್ಕೆ ಹಾರುವುದನ್ನು ನೋಡಿ ಸಾರ್ವ ಜನಿಕರು ಭಯಭೀತ ರಾಗಬಾರದು ಎಂದು ಜಿಲ್ಲಾಧಿಕಾರಿ ಕೆ. ಇಂಭಶೇಖರನ್ ತಿಳಿಸಿದ್ದಾರೆ.







