ಕಾಸರಗೋಡು: ಸ್ವಾತಂತ್ರ್ಯೋ ತ್ಸವ ಆಚರಣೆಗೆ ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳನ್ನು ಬಳಸುವುದು ಕಾನೂನು ವಿರುದ್ಧವಾಗಿದೆಯೆಂದು ಜಿಲ್ಲಾ ಶುಚಿತ್ವ ಮಿಷನ್ ತಿಳಿಸಿದೆ. ಆದ್ದರಿಂದ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ಬಳಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಪ್ಲಾಸ್ಟಿಕ್ ಧ್ವಜ ತಯಾರಿ, ಮಾರಾಟ, ವಿತರಣೆ, ಪ್ರದರ್ಶನ ಪತ್ತೆಯಾದಲ್ಲಿ ದಂಡ ಸಹಿತ ಕಾನೂನು ಕ್ರಮ ಕೈಗೊಳ್ಳುವುದಾಗಿ ಶುಚಿತ್ವ ಮಿಷನ್ ಕೋ-ಆರ್ಡಿನೇಟರ್ ಪಿ. ಜಯನ್ ತಿಳಿಸಿದ್ದಾರೆ.