ಎಡ-ಕಾಂಗ್ರೆಸ್‌ನಿಂದ ಕೇರಳದಲ್ಲಿ ಅವಕಾಶ ರಾಜಕಾರಣ- ಕಿಶೋರ್ ಕುಮಾರ್

ಮೀಯಪದವು: ಕೇರಳದಲ್ಲಿ ಎಡರಂಗ ಮತ್ತು ಕಾಂಗ್ರೆಸ್, ಮುಸ್ಲಿ ಲೀಗ್ ಪಕ್ಷಗಳಿಗೆ ತತ್ವ ಸಿದ್ಧಾಂತಗಳಿಲ್ಲ. ಅವರು ಅಧಿಕಾರಕ್ಕಾಗಿ ಅವಕಾಶ ರಾಜಕಾರಣ ನಡೆಸುತ್ತಿರುವುದಾಗಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಕಿಶೋರ್ ಕುಮಾರ್ ಆರೋಪಿಸಿದರು. ಮೀಂಜ ಪಂಚಾಯತ್ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸ್ಥಳೀಯಾಡಳಿತ ಚುನಾವಣೆಯಲ್ಲಿ ಗ್ರಾಮಗಳಲ್ಲಿ ಬಿಜೆಪಿಯನ್ನು ಆಡಳಿತಕ್ಕೇರಿಸಬೇಕೆಂದು ಅವರು ಕರೆ ನೀಡಿದರು. ಶಬರಿಮಲೆಯಲ್ಲಿ ಲೂಟಿ ಮಾಡಿ ಜೈಲು ಸೇರಿರುವ ಎಡರಂಗಕ್ಕೆ ಆಸ್ತಿಕ ಬಂಧುಗಳು ಮತ ನೀಡುವುದಿಲ್ಲ ಎಂಬ ನಿರ್ಧಾರಕ್ಕೆ ಬರಬೇಕು ಎಂದು ಅವರು ಕರೆ ನೀಡಿದರು.

ಪಂಚಾಯತ್ ಸಮಿತಿ ಅಧ್ಯಕ್ಷ ಬೆಜ್ಜ ಚಂದ್ರಹಾಸ ಅಧ್ಯಕ್ಷತೆ ವಹಿಸಿದರು. ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಮಾಧು ವಳಪ್ಪಿಲ, ಸಲೀಲ್, ಪದ್ಮನಾಭ ರೈ, ಮುಂದಿಲ ಶಂಕರನಾರಾಯಣ ಹಾಗೂ ಪಕ್ಷದ ಅಭ್ಯರ್ಥಿಗಳು ಉಪಸ್ಥಿತರಿದ್ದರು. ಕರುಣಾಕರ್ ರೈ ಸ್ವಾಗತಿಸಿ, ಕೃಷ್ಣ ಬೆಜ್ಜ ವಂದಿಸಿದರು.

RELATED NEWS

You cannot copy contents of this page