ಪ್ರಧಾನಿ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಹತ್ಯೆಗೆ ಸ್ಕೆಚ್: ಕರ್ನಾಟಕದಿಂದ ಬಂಧಿತರಾದ ಉಗ್ರರ ಸಂಚು ಬಯಲು

ಹಾಸನ: ದೇಶದಲ್ಲಿ ಭಯೋತ್ಪಾದನಾ ಕೃತ್ಯವೆಸಗಲು ಭಾರೀ ಸಂಚು ಹೂಡಿದುದಕ್ಕೆ ಸಂಬಂಧಿಸಿ ಹಾಸನ ಅರಕಲಕೂಡು ಮತ್ತು ಚಿಕ್ಕಬಳ್ಳಾಪುರ ನಗರದಿಂದ ಪೊಲೀಸರು ಬಂಧಿಸಿದ ಇಬ್ಬರು ಉಗ್ರರು  ಪ್ರಧಾನಮಂತ್ರಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕರ್ನಾಟಕ  ಶಾಸಕ ಬಸವರಾಜ ಪಾಟೀಲ್ ಯತ್ನಾಳ್, ಎಂ.ಎಲ್.ಸಿ ಸಿ.ಟಿ ರವಿ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಮೊದಲಾದವರ ಹತ್ಯೆಗೆ ಸ್ಕೆಚ್ ಹಾಕಿಕೊಂಡಿದ್ದಾರೆಂದು ಪೊಲೀಸ್ ತನಿಖೆಯಲ್ಲಿ ಬಯಲುಗೊಂಡಿದೆ.

ಚಿಕ್ಕಬಳ್ಳಾಪುರದ ಬಾಪೂಜಿ ನಗರ ನಿವಾಸಿ ಶಬ್ಬೀರ್ ಮತ್ತು ಹಾಸನ ಜಿಲ್ಲೆಯ ಅರಕಲಕೂಡಿನಲ್ಲಿ ರಸ್ತೆ ಕಾಮಗಾರಿ ಕಾರ್ಮಿಕನ ಸೋಗಿನಲ್ಲಿ ತಲುಪಿದ್ದ ಮೂಲತಃ   ಬಿಹಾರ ನಿವಾಸಿ ಸಲಾಮಿನ್  ಎಂಬಿಬ್ಬರು ಉಗ್ರರನ್ನು ಕರ್ನಾಟಕ ಪೊಲೀಸರು ನಿನ್ನೆ ಬಂಧಿಸಿದ್ದರು. ಇವರು ಟೆಲಿಗ್ರಾಂ ಆಪ್  ರಚಿಸಿ  ದೇಶದಲ್ಲಿ  ಹಲವು ಗಣ್ಯ ವ್ಯಕ್ತಿಗಳ ಹತ್ಯೆಗೆ ಹಾಗೂ ವಿಧ್ವಂಸಕ ಕೃತ್ಯಗಳನ್ನು ನಡೆಸಲು,  ಅದಕ್ಕಾಗಿ  ಹಣ ಸಂಗ್ರಹಿಸುವ ಯತ್ನದಲ್ಲೂ ತೊಡಗಿದ್ದರೆಂದು ಪೊಲೀಸ್ ತನಿಖೆಯಲ್ಲಿ  ಬಯಲುಗೊಂಡಿದೆ.  ಬಂಧಿತರ ಮೊಬೈಲ್ ಫೋನ್  ಪೊಲೀಸರು ವಶಪಡಿಸಿ   ಅದರ ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಆಪ್ ಪರಿಶೀಲಿಸಿದಾಗ  ಆರೋಪಿಗಳ ಸಂಚು ಬಯಲುಗೊಂಡಿದೆ. ಇದಕ್ಕೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 113ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದು ವರಿಸಿದ್ದಾರೆ. ಬಂಧಿತರ ಇನ್‌ಸ್ಟಾ ಗ್ರಾಂ, ಟೆಲಿಗ್ರಾಂ ಗ್ರೂಪ್‌ನಲ್ಲಿ ನಡೆದ ಚರ್ಚೆಗಳು, ಸದಸ್ಯರ ಸಂಪರ್ಕ ಹಾಗೂ  ಸಂಚಿನ ಹಿಂದೆ  ಬೇರೆ ಯಾರಾದರೂ ಶಾಮೀಲಾಗಿದ್ದಾ ರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ.

RELATED NEWS

You cannot copy contents of this page