ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ತಪಾಸಣೆ ತೀವ್ರಗೊಳಿಸಲಾಗಿದೆ. ಮಾವಿನಕಟ್ಟೆಯಲ್ಲಿ ಇತ್ತೀಚೆಗೆ ಪ್ಲಸ್‌ಟು ವಿದ್ಯಾರ್ಥಿ ಸ್ಕೂಟರ್ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅಪಘಾತ ಗಳನ್ನು ತಡೆಗಟ್ಟುವ ಅಂಗವಾಗಿ ವಾಹನ ತಪಾಸಣೆ ತೀವ್ರಗೊಳಿಸುವಂತೆ ಇನ್‌ಸ್ಪೆಕ್ಟರ್ ಕೆ.ಪಿ. ಜಿಜೀಶ್ ನಿರ್ದೇಶ ನೀಡಿದ್ದಾರೆ. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನಗಳಲ್ಲಿ ಸಂಚಾರ, ಇಬ್ಬರಿಗಿಂತ ಹೆಚ್ಚು ಮಂದಿ ಪ್ರಯಾಣಿಸುವುದು, ಲೈಸನ್ಸ್ ಇಲ್ಲದೆ ವಾಹನ ಚಲಾಯಿ ಸುವುದು, ಪ್ರಾಯಪೂರ್ತಿಯಾಗದ ಮಕ್ಕಳು ವಾಹನ ಚಲಾಯಿಸುವುದು, ಅಪರಿಚಿತ ವೇಗದಲ್ಲಿ ಸಂಚಾರ ಮೊದಲಾದ ಕಾನೂನು ಉಲ್ಲಂಘನೆಗಳ ವಿರುದ್ಧ ಇಂದಿನಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಾಯಪೂರ್ತಿಯಾಗದ ಮಕ್ಕಳಿಗೆ ವಾಹನ ನೀಡುವ ಆರ್.ಸಿ. ಮಾಲಕರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಮೋಟಾರು ವಾಹನ ಕಾನೂನು ಪ್ರಕಾರ ೨೫೦ ವಾಟ್‌ಗಿಂತ ಕಡಿಮೆ ಶಕ್ತಿಯ ವಿದ್ಯುತ್ ಸ್ಕೂಟರ್‌ಗಳಿಗೆ ನಂಬ್ರ ಪ್ಲೇಟ್ ಹಾಗೂ ಚಲಾಯಿಸುವವರಿಗೆ ಹೆಲ್ಮೆಟ್ ಅಗತ್ಯವಿಲ್ಲ. ಆದರೆ ಈ ವಾಹನಗಳನ್ನು ೧೬ ವರ್ಷಕ್ಕಿಂತ ಕೆಳಪ್ರಾಯದವರು ಚಲಾಯಿಸಿದರೆ ಅವರ ವಿರುದ್ದ ಕ್ರಮ ಕೈಗೊಳ್ಳ ಲಾಗುವುದು. ಇಂತಹ ವಾಹನಗಳಲ್ಲಿ ಒಬ್ಬರು ಮಾತ್ರವೇ ಸಂಚರಿ ಸಬಹುದಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
