ಮಂಜೇಶ್ವರ: ಪ್ರಾಯಪೂರ್ತಿ ಯಾಗದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ಚಿತ್ರದುರ್ಗ ನಿವಾಸಿ ತಿಮ್ಮಯ್ಯ (38) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. 2020ರಲ್ಲಿ ಈತ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶವೊಂದರ ನಿವಾಸಿಯಾದ ಬಾಲಕಿಗೆ ಕಿರುಕುಳ ನೀಡಿದ ಬಗ್ಗೆ ದೂರಲಾಗಿತ್ತು. ಇದರಂತೆ ಪೊಲೀಸರು ತಿಮ್ಮಯ್ಯನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಈ ವೇಳೆ ರಿಮಾಂಡ್ ಗೊಳಗಾದ ಆರೋಪಿ ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ಬಳಿಕ ಹಾಜರಾಗದೆ ತಲೆಮರೆಸಿಕೊಂ ಡಿದ್ದನು. ಈ ಹಿನ್ನೆಲೆಯಲ್ಲಿ ಆರೋ ಪಿಗಾಗಿ ಪೊಲೀಸರು ಶೋಧ ನಡೆಸು ತ್ತಿದ್ದಾಗ ಈತ ಬೆಂಗಳೂರಿನಲ್ಲಿರುವುದಾಗಿ ತಿಳಿದುಬಂದಿತ್ತು. ಇದರಂತೆ ಎಸ್‌ಪಿ ನಿರ್ದೇಶದ ಮೇರೆಗೆ ಎಎಸ್‌ಪಿ ಮೇಲ್ನೋಟದಲ್ಲಿ ಎಸ್‌ಐ ಉಮೇಶ್, ಎಎಸ್‌ಐ ಸಹಿತ ಪೊಲೀಸರಾದ ಸುಭಾಶ್, ಚಂದ್ರಕಾಂತ್ ಬೆಂಗಳೂರಿಗೆ ತೆರಳಿ ತಿಮ್ಮಯ್ಯನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವು ದಾಗಿ ಪೊಲೀಸರು ತಿಳಿಸಿದ್ದಾರೆ.