ಕಾಸರಗೋಡು: ಬೇಕರಿಗೆ ಬಂದ ಎಂಟರ ಹರೆಯದ ಬಾಲಕಿ ಮುಂದೆ ವೃದ್ದನೋರ್ವ ನಗ್ನತೆ ಪ್ರದರ್ಶಿಸಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಪಾಣತ್ತೂರು ಮಾಪಿಲಚ್ಚೇರಿಯ ಗಂಗಾಧರನ್ (68) ಎಂಬಾತನ ವಿರುದ್ಧ ರಾಜಪುರಂ ಪೊಲೀ ಸರು ಪೋಕ್ಸೋ ಕೇಸು ದಾಖಲಿಸಿಕೊಂ ಡಿದ್ದಾರೆ. ಪಾಣತ್ತೂರಿನ ಬೇಕರಿಯೊಂ ದರಲ್ಲಿ ಇತ್ತೀಚೆಗೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ.
ಬಾಲಕಿ ಬೇಕರಿಯಿಂದ ಸಾಮಗ್ರಿ ಖರೀದಿಸಲು ತಲುಪಿದ್ದಳೆನ್ನಲಾಗಿದೆ. ಅಂಗಡಿ ಮಾಲಕ ಒಳಗೆ ಹೋಗಿ ಸಾಮಗ್ರಿ ತೆಗೆಯುತ್ತಿದ್ದಾಗ ಅಂಗಡಿಯಲ್ಲಿದ್ದ ವೃದ್ದ ಬಾಲಕಿಯ ಮುಂದೆ ನಗ್ನತೆ ಪ್ರದರ್ಶಿಸಿರುವುದಾಗಿ ದೂರಲಾಗಿದೆ.







