ಮಗಳ ಸ್ನೇಹಿತೆಗೆ ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು:  ಮಗಳ ಸ್ನೇಹಿತೆಗೆ  ಅಶ್ಲೀಲ ಸಂದೇಶ ಕಳುಹಿಸಿದ  ವ್ಯಕ್ತಿ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ಕೊಂಡಿದ್ದಾರೆ.  ಸೆಬಾಸ್ಟಿ ಯನ್ ಎಂಬ ವ್ಯಕ್ತಿ ವಿರುದ್ಧ  ಚಿಟ್ಟಾರಿಕಲ್    ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಆರೋಪಿಯ ಮಗಳು ಹಾಗೂ ದೂರುದಾತೆ ಯಾದ ಬಾಲಕಿ 10ನೇ ತರಗತಿ ವಿದ್ಯಾರ್ಥಿನಿಯರಾಗಿದ್ದಾರೆ. ಆರೋಪಿ ಹಾಗೂ ಪುತ್ರಿ ಒಂದೇ ಮೊಬೈಲ್ ಫೋನ್ ಉಪಯೋಗಿ ಸುತ್ತಿದ್ದಾರೆ.  ಈ ಮೊಬೈಲ್‌ನಿಂದ ದೂರುದಾತೆಯ ಮೊಬೈಲ್ ಫೋನ್ ನಂಬ್ರ ಆರೋಪಿಗೆ ಲಭಿ ಸಿದೆಯೆಂದು ಸಂಶಯಿಸಲಾಗುತ್ತಿದೆ. ಆರೋಪಿಯನ್ನು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದರೆ ಇನ್ನಷ್ಟು ಮಾಹಿತಿಗಳು ಲಭಿಸಲಿದೆಯೆಂದು ಪೊಲೀಸರು ತಿಳಿಸುತ್ತಿದ್ದಾರೆ.

RELATED NEWS

You cannot copy contents of this page