ವಿದ್ಯಾರ್ಥಿನಿಗೆ ದೌರ್ಜನ್ಯ ಬಂದ್ಯೋಡು ನಿವಾಸಿ ವಿರುದ್ಧ ಪೋಕ್ಸೋ ಕೇಸು ದಾಖಲು

ಬಂದ್ಯೋಡು: 17 ವರ್ಷದ ಒಟಿಟಿ ವಿದ್ಯಾರ್ಥಿನಿಯನ್ನು ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. ಖಾಸಗಿ ಆಸ್ಪತ್ರೆಯ ಆಪರೇಶನ್ ಥಿಯೇಟರ್‌ನ ನೌಕರನ ವಿರುದ್ಧ ಚಂದೇರ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಬಂದ್ಯೋಡು ನಿವಾಸಿಯಾದ ಮೊಹಮ್ಮದ್ ಸಾದಿಕ್ ವಿರುದ್ಧ ಈ ಕೇಸು ದಾಖಲಿಸಲಾಗಿದೆ. ಚಂದೇರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ನಿವಾಸಿ ಬಾಲಕಿ ಮೊಹಮ್ಮದ್ ಸಾದಿಕ್ ಕೆಲಸ ಮಾಡುವ ಖಾಸಗಿ ಆಸ್ಪತ್ರೆಯ ಒಟಿಟಿ ವಿದ್ಯಾರ್ಥಿನಿಯಾಗಿದ್ದಾಳೆ. ಘಟನೆ ನಡೆದದ್ದು ಮಂಜೇಶ್ವರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಾದ ಕಾರಣ ಚಂದೇರ ಪೊಲೀಸರು ಈ ಕೇಸನ್ನು ಮಂಜೇಶ್ವರ ಠಾಣೆಗೆ ಹಸ್ತಾಂತರಿಸಿದ್ದಾರೆ.

You cannot copy contents of this page