ಮುಳ್ಳೇರಿಯ: ಬೆಳ್ಳೂರು ಹಾಗೂ ಕರ್ನಾಟಕದ ಈಶ್ವರಮಂಗಲ ನಿವಾಸಿಗಳಾದ ಇಬ್ಬರನ್ನು ಆದೂರು ಪೊಲೀಸರು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದಾರೆ.
ಬೆಳ್ಳೂರಿನ ಮೀನು ವ್ಯಾಪಾರಿ ರಫೀಕ್ (45), ಈಶ್ವರಮಂಗಲ ಮೈಂದನಡ್ಕದ ನಾಸಿರ್ (42) ಎಂಬಿವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಫೀಕ್ ಇತ್ತೀಚೆಗೆ 16ರ ಹರೆಯದ ವಿದ್ಯಾರ್ಥಿಗೆ ಸಲಿಂಗರತಿ ಕಿರುಕುಳ ನೀಡಿರುವುದಾಗಿ ದೂರ ಲಾಗಿದೆ. ಘಟನೆ ಬಳಿಕ ಶಾಲೆಯಲ್ಲಿ ನಡೆದ ಕೌನ್ಸಿಲಿಂಗ್‌ನಲ್ಲಿ ಬಾಲಕ ಕಿರುಕುಳ ಬಗ್ಗೆ ತಿಳಿಸಿದ್ದನು. ಈ ಬಗ್ಗೆ ಲಭಿಸಿದ ದೂರಿನಂತೆ ಕೇಸು ದಾಖಲಿ ಸಿಕೊಂಡ ಪೊಲೀಸರು ರಫೀಕ್‌ನನ್ನು ಬಂಧಿಸಿದ್ದಾರೆ.
ಒಂದು ವಾರ ಹಿಂದೆ ಮನೆಗೆ ತೆರ ಳುತ್ತಿದ್ದ ವಿದ್ಯಾರ್ಥಿನಿಯನ್ನು ಸ್ಕೂಟರ್ ನಲ್ಲಿ ತಲುಪಿದ ನಾಸಿರ್ ಸ್ಕೂಟರ್‌ಗೆ ಹತ್ತುವಂತೆ ಒತ್ತಾಯಿಸಿದ್ದನು. ಅದಕ್ಕೆ ನಿರಾಕರಿಸಿದ ಬಾಲಕಿಯನ್ನು ಈತ ನಿಂದಿಸಿದ್ದನೆನ್ನಲಾಗಿದೆ. ಈ ವಿಷಯವನ್ನು ಬಾಲಕಿ ಮನೆಯ ವರಲ್ಲಿ ತಿಳಿಸಿದ್ದಾಳೆ. ಅನಂತರ ಪೊಲೀಸರಿಗೆ ದೂರು ನೀಡಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ನಾಸಿರ್‌ನ ಗುರುತು ಪತ್ತೆಹಚ್ಚಲಾಗಿದೆ. ಆದೂರು ಪೊಲೀಸ್ ಇನ್ಸ್‌ಪೆಕ್ಟರ್ ವಿಷ್ಣುಪ್ರಸಾದ್, ಎಸ್‌ಐಗಳಾದ ಸತೀಶನ್, ಅಜ್ಮಲ್ ಎಂಬಿವರ ನೇತೃತ್ವದಲ್ಲಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ.






