ಸರ್ವೀಸ್ ರಸ್ತೆಯ ಫುಟ್‌ಪಾತ್‌ನಲ್ಲಿ ಟ್ರಾನ್ಸ್‌ಫಾರ್ಮರ್  ಸಹಿತ ಕಂಬಗಳು: ಕಾಲ್ನಡಿಗೆ ಜನರಿಗೆ ಸಮಸ್ಯೆ

ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ  ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆ ಬದಿ ಜನರ ಸಂಚಾರಕ್ಕೆ ಫುಟ್‌ಪಾತ್ ನಿರ್ಮಿಸಲಾಗಿದ್ದರೂ ಅಲ್ಲಲ್ಲಿ ಟ್ರಾನ್ಸ್ ಫಾರ್ಮರ್ ಸಹಿತ ವಿದ್ಯುತ್ ಕಂಬಗಳಿರುವುದರಿಂದಾಗಿ ಜನರ ಸಂಚಾರಕ್ಕೆ ಸಮಸ್ಯೆ ಉಂಟಾಗು ತ್ತಿರುವುದಾಗಿ ದೂರಲಾಗಿದೆ. ಕೋಟ್ಯಂತರ ಹಣ ವ್ಯಯಿಸಿ ಸ್ಥಳ ಖರೀದಿಸಿ ಹೆದ್ದಾರಿಯನ್ನು ಅಭಿವೃದ್ಧಿ ಗೊಳಿ ಸಲಾದರೂ ವಿದ್ಯುತ್‌ಕಂಬ ಸಹಿತ ಟ್ರಾನ್ಸ್ ಫಾರ್ಮರ್ ಹಾಗೂ ಕಾಲ್ನಡಿಗೆ ಮೇಲ್ಸೇತುವೆಯ ಕಂಬಗಳನ್ನು ಜನರು ನಡೆದಾಡುವ ಫುಟ್‌ಪಾತ್‌ನಲ್ಲಿಯೇ ನಿರ್ಮಾಣ ಗೊಳಿಸಿರುವುದು ಸಾರ್ವಜನಿಕರಿಗೆ ಸಂಕಷ್ಟವನ್ನುಂಟುಮಾಡಿದೆ. ಉಪ್ಪಳದಿಂದ ತಲಪಾಡಿ ಮಧ್ಯೆ ಎರಡೂ ಭಾಗದ ಸರ್ವೀಸ್ ರಸ್ತೆಯ ಫುಟ್‌ಪಾತ್‌ನಲ್ಲಿಯೇ ಅಲ್ಲಲ್ಲಿ ಟ್ರಾನ್ಸ್ ಫಾರ್ಮರ್ ಹಾಗೂ ವಿದ್ಯುತ್ ಕಂಬಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಉಪ್ಪಳ ಹಿದಾಯತ್‌ನಗರ, ಉಪ್ಪಳ ಗೇಟ್ ಸಹಿತ ಇತರ ಕಡೆಗಳಲ್ಲಿ  ವ್ಯಕ್ತಿ ಗಳ ಆವರಣಗೋಡೆ ಇರುವುದರಿಂದ ಅಲ್ಲಿ ಇನ್ನೂ ಫುಟ್ ಪಾತ್ ನಿರ್ಮಾಣಗೊಳ್ಳಲು ಬಾಕಿಯಿದೆ. ಸರ್ವೀಸ್ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ಅಪಘಾತದ ಭೀತಿ ಜನರನ್ನು ಕಾಡುತ್ತಿದೆ.

RELATED NEWS

You cannot copy contents of this page