ಕಾಸರಗೋಡು: ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಅಮಾಯಕರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯಗಳನ್ನು ಪ್ರತಿಭಟಿಸಿ ಕಾಂಗ್ರೆಸ್ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ ಜಿಲ್ಲೆಯ ಪೊಲೀಸ್ ಠಾಣೆಗಳ ಮುಂದೆ ಪ್ರತಿಭಟನಾ ಸಭೆ ನಡೆಸಲು ಪಕ್ಷದ ಜಿಲ್ಲಾ ಸಮಿತಿ ಸಭೆ ತೀರ್ಮಾನಿಸಿದೆ.
ಇದರಂತೆ ಜಿಲ್ಲಾ ಮಟ್ಟದ ಪ್ರತಿಭಟನಾ ಸಭೆ ಬೇಡಗಂ ಪೊಲೀಸ್ ಠಾಣೆ ಮುಂದೆ ನಾಳೆ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ. ಇದನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಇದರ ಹೊರತಾಗಿ ಮೇಲ್ಪರಂಬ, ಬೇಕಲ, ರಾಜಪುರಂ, ವೆಳ್ಳರಿಕುಂಡ್, ಅಂಬಲತರ, ಹೊಸದುರ್ಗ, ಬದಿಯಡ್ಕ, ಆದೂರು, ಕುಂಬಳೆ, ಮಂಜೇಶ್ವರ, ಚಿತ್ತಾರಿಕಲ್, ಚೀಮೇನಿ, ನೀಲೇಶ್ವರ ಮತ್ತು ಚಂದೇರ ಪೊಲೀಸ್ ಠಾಣೆಗಳ ಮುಂದೆಯೂ ನಾಳೆ ಕಾಂಗ್ರೆಸ್ ಪ್ರತಿಭಟನಾ ಸಭೆಗಳನ್ನುನಡೆಸಲಿದೆ.