ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಿಕುಳಂನಲ್ಲಿ ಮುಚ್ಚುಗಡೆಗೊಳಿಸಿದ ಮನೆಯೊಳಗೆ ಪತ್ತೆಯಾದ ಪ್ರಾಚ್ಯ ವಸ್ತುಗಳಿಗೆ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ಆರ್ಕಿ ಯೋಲಜಿಕಲ್ ಸರ್ವೇಯ ತೃಶೂರು ವಲಯ ಅಧಿಕಾರಿಗಳ ನಿರ್ದೇಶದಂತೆ ಪೊಲೀಸರು ಬಿಗು ಕಾವಲು ಏರ್ಪಡಿಸಿದ್ದಾರೆ. ಆರ್ಕಿಯೋಲಜಿಕಲ್ ಇಲಾಖೆ ಅಧಿಕಾರಗಳು ಈ ತಿಂಗಳ 24ರಂದು ತಲುಪಿ ಪ್ರಾಚ್ಯ ವಸ್ತುಗಳನ್ನು ಪರಿಶೀಲಿಸಲಿದ್ದಾರೆ. ಅದುವರೆಗೆ ಇವುಗಳು ಪೊಲೀಸರ ಕಾವಲಿನಲ್ಲಿರಲಿದೆ.
ಬೇಕಲ ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲೇ ಜನವಾಸವಿಲ್ಲದ ಮನೆಯಲ್ಲಿ ಪ್ರಾಚ್ಯವಸ್ತುಗಳು ಮೊನ್ನೆ ಸಂಜೆ ಪತ್ತೆಯಾಗಿದೆ. ಗುಪ್ತ ಮಾಹಿತಿ ಮೇರೆಗೆ ಬೇಕಲ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ವಿ.ಶ್ರೀದಾಸ್‌ರ ನೇತೃತ್ವದ ಪೊಲೀಸರು ನಡೆಸಿದ ಪರಿಶೀಲನೆ ವೇಳೆ ಮುಚ್ಚುಗಡೆಗೊಳಿಸಿದ ಮನೆ ಹಾಗೂ ಸಮೀಪದಲ್ಲಿರುವ ಏಕ ಕೊಠಡಿ ಕಟ್ಟಡದಲ್ಲಿ ಪ್ರಾಚ್ಯ ವಸ್ತುಗಳು ಕಂಡುಬಂದಿದೆ. ಕಂಚಿನ ಪಾತ್ರೆಗಳು, ಖಡ್ಗಗಳು ಮೊದಲಾದವುಗಳು ಕಂಡುಬಂದಿದೆ. ಬೇರೇನು ಇವೆಯೆಂದು ಪೊಲೀಸರು ಪರಿಶೀಲಿಸಲು ತೊಡಗಿ ದಾಗ ಅಲ್ಲಿ ಹಾವೊಂದು ಪ್ರತ್ಯಕ್ಷ ಗೊಂಡಿತು. ಇದರಿಂದ ಪರಿಶೀಲನೆ ಮುಂದುವರಿಸಲಾಗದೆ ಪೊಲೀಸರು ಮನೆ ಹಾಗೂ ಕಟ್ಟಡಕ್ಕೆ ಬೀಗ ಜಡಿದು ಮೊಹರುಗೊಳಿಸಿದ್ದಾರೆ.
ಜನವಾಸವಿಲ್ಲದ ಮನೆ, ಕಟ್ಟಡದಲ್ಲಿ ಪ್ರಾಚ್ಯವಸ್ತುಗಳು ಕಂಡುಬಂದಿರುವುದು ನಾಡಿನಲ್ಲಿ ಭಾರೀ ಚರ್ಚೆಗೂ ಗ್ರಾಸವಾ ಗಿದೆ. ಜನರು ಹಲವು ರೀತಿಯ ಅಭಿಪ್ರಾ ಯಗಳನ್ನು ವ್ಯಕ್ತಪಡಿಸಿದ್ದಾರೆ. ಶ್ರೀ ಪದ್ಮ ನಾಭಸ್ವಾಮಿಯ ತಿರುವಾಭರಣಗಳು, ಟಿಪ್ಪುಸುಲ್ತಾನನ ಖಡ್ಗ ಮೊದಲಾದವು ಗಳನ್ನು ತೋರಿಸಿ ಕೆಲವು ಮಂದಿ ಕೋಟ್ಯಂತರ ರೂಪಾಯಿಗಳನ್ನು ಸಂಪಾದಿಸಿದ್ದಾರೆಂದೂ ಹೇಳಲಾಗುತ್ತಿದೆ. ಇನ್ನು ಆರ್ಕಿಯೋ ಲಜಿಕಲ್ ಇಲಾಖೆ ಅಧಿಕಾರಿಗಳು ತಲುಪಿ ಪರಿಶೀಲಿಸಿದಾಗ ಮಾತ್ರವೇ ಸಂಪೂರ್ಣ ಮಾಹಿತಿ ತಿಳಿಯಬಹುದಾಗಿದೆ.