ಉಪ್ಪಳ: ರಸ್ತೆಯಲ್ಲಿ ಶೌಚಾ ಲಯ ತ್ಯಾಜ್ಯವನ್ನು ಉಪೇಕ್ಷಿಸಿದ ಬಗ್ಗೆ ಲಭಿಸಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ವರ್ಕಾಡಿ ಪಂಚಾಯತ್‌ನ ಮೊರತ್ತಣೆಯಿಂದ ಅರಿಬೈಲು ಕಜೆಕೋಡಿ ತನಕದ ಲೋಕೋಪ ಯೋಗಿ ರಸ್ತೆಯಲ್ಲಿ ಶೌಚಾಲಯ ತ್ಯಾಜ್ಯವನ್ನು ಉಪೇಕ್ಷಿಸಲಾಗಿದೆ. ಮೊನ್ನೆ ರಾತ್ರಿ ವಾಹನದಲ್ಲಿ ತ್ಯಾಜ್ಯವನ್ನು ತಂದು ರಸ್ತೆಯಲ್ಲಿ ಉಪೇಕ್ಷಿಸಿರುವುದಾಗಿ ಅಂದಾಜಿಸ ಲಾಗಿದೆ. ನಿನ್ನೆ ಬೆಳಿಗ್ಗೆ ಇದು ನಾಗರಿಕರ ಗಮನಕ್ಕೆ ಬಂದಿದೆ. ನಾಗರಿಕರು ನೀಡಿದ ಮಾಹಿತಿ ಪ್ರಕಾರ ಪಂಚಾಯತ್ ಕಾರ್ಯದರ್ಶಿ ಅಜಿತ್ ಎಚ್. ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ತ್ಯಾಜ್ಯ ಉಪೇಕ್ಷಿಸಿದವರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.
