ಪೊಲೀಸ್‌ನ ಪತ್ನಿ ಕಿಚ್ಚಿರಿಸಿದ ವೃದ್ಧೆ ಮೃತ್ಯು:ಆರೋಪಿ ಸೆರೆ

ಪತ್ತನಂತಿಟ್ಟ: ಪೊಲೀಸ್‌ನ ಪತ್ನಿ ಬೆಂಕಿ ಹಚ್ಚಿದ ಆಶಾ ಕಾರ್ಯಕರ್ತೆ ಮೃತಪಟ್ಟರು. ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಪತ್ತನಂತಿಟ್ಟ ಕೇಳ್ಪಾಯೂರ್ ನಿವಾಸಿ ಲತಾ ಕುಮಾರಿ (61) ಮೃತಪಟ್ಟವರು. ಕೋಟ್ಟಯಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಯಲ್ಲಿರುವಾಗ ನಿನ್ನೆ ರಾತ್ರಿ ಮರಣ ಸಂಭವಿಸಿದೆ. ಅಕ್ಟೋಬರ್ 9ರಂದು ಘಟನೆ ನಡೆದಿದೆ. ಕಳವು ಯತ್ನವನ್ನು ತಡೆಯುತ್ತಿದ್ದ ಮಧ್ಯೆ ತಮಗೆ ಬೆಂಕಿ ತಗಲಿದೆಯೆಂದು ಚಿಕಿತ್ಸೆ ವೇಳೆ ಲತಾ ಕುಮಾರಿ ತಿಳಿಸಿದ್ದರು. ಸಮೀಪದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಪೊಲೀಸ್‌ನ ಪತ್ನಿ ಸುಮಯ್ಯ ಮನೆಗೆ ಅತಿಕ್ರಮಿಸಿ ನುಗ್ಗಿ ಕಿಚ್ಚಿರಿಸಿರುವುದಾಗಿ  ಲತಾ ಕುಮಾರಿ ಹೇಳಿಕೆ ನೀಡಿದ್ದಾರೆ. ಸುಮಯ್ಯ ತನ್ನಲ್ಲಿ ಚಿನ್ನಾಭರಣ ಕೇಳಿದ್ದಳು. ಆದರೆ ನಾನು ನೀಡಿರಲಿಲ್ಲ. ಅದರ ದ್ವೇಷದಿಂದ ಕಿಚ್ಚಿರಿಸಿರಬೇಕೆಂದು ಲತಾ ಕುಮಾರಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದರು. ತನ್ನನ್ನು ಕಟ್ಟಿಹಾಕಿದ ಬಳಿಕ ಚಿನ್ನಾಭರಣವನ್ನು ಸುಮಯ್ಯ ತೆಗೆದು ಕೊಂಡು ಹೋಗಿರುವುದಾಗಿಯೂ ಹೇಳಿಕೆ ನೀಡಿದ್ದು, ಪ್ರಕರಣದಲ್ಲಿ ಸುಮ ಯ್ಯಳನ್ನು ಪೊಲೀಸರು ಬಂಧಿಸಿದ್ದಾರೆ.

You cannot copy contents of this page