ವರ್ಕಾಡಿ ಸುಳ್ಯಮೆಯಲ್ಲಿ ಕೋಳಿ ಅಂಕ ಕೇಂದ್ರಕ್ಕೆ ಪೊಲೀಸ್ ದಾಳಿ: ಮೂವರ ಸೆರೆ

ಉಪ್ಪಳ: ವರ್ಕಾಡಿ ಕೊಡ್ಲ ಮೊಗರು ಸುಳ್ಯಮೆಯಲ್ಲಿ  ಕೋಳಿ ಅಂಕ ಕೇಂದ್ರಕ್ಕೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ ಮೂರು ಮಂದಿಯನ್ನು ಬಂಧಿಸಿದ್ದಾರೆ.  ಮಂಗ ಳೂರು ಕುಂಪಲದ ಮಲ್ಲಿಕಾರ್ಜುನ (65), ತೊಕ್ಕೋಟುವಿನ  ಬಾಡಿಗೆ ಮನೆಯಲ್ಲಿ ವಾಸಿಸುವ ಎಸ್. ಗಣೇಶ (49), ವರ್ಕಾಡಿ ಬಾಕ್ರಬೈಲಿನ ಜನಾರ್ದನ (67) ಎಂಬಿವರನ್ನು ಮಂಜೇಶ್ವರ ಎಸ್‌ಐ ಕೆ.ಆರ್. ಉಮೇಶ್ ನೇತೃತ್ವದ ತಂಡ ಬಂಧಿಸಿದೆ. ಕೋಳಿ ಅಂಕ ಸ್ಥಳದಿಂದ 3220  ರೂಪಾಯಿ ಹಾಗೂ ಒಂದು ಕೋಳಿಯನ್ನು ವಶಪಡಿಸಲಾಗಿದೆ. ಬಂಧಿತರನ್ನು ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆಯೆಂದು    ಪೊಲೀಸರು ತಿಳಿಸಿದ್ದಾರೆ.  ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸ್ ತಂಡ ನಿನ್ನೆ ಸಂಜೆ 4.30ರ ವೇಳೆ  ಸುಳ್ಯಮೆಯ ಶೇಂದಿ ಅಂಗಡಿ ಸಮೀಪದ ಕೋಳಿ ಅಂಕ ಸ್ಥಳಕ್ಕೆ ತಲುಪಿದ. ಈ ವೇಳೆ ಪೊಲೀಸರನ್ನು ಕಂಡು ಸ್ಥಳದಲ್ಲಿದ್ದ ಕೆಲವರು ಓಡಿ ಪರಾರಿಯಾಗಿದ್ದಾರೆ. ಈ ಮಧ್ಯೆ ಮೂವರನ್ನು ಓಡಿಸಿ ಸೆರೆಹಿಡಿಯಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ತಂಡದಲ್ಲಿ ಎಸ್‌ಐಗಳಾದ ವೈಷ್ಣವ್ ರಾಮಚಂದ್ರನ್, ಶಬರಿಕೃಷ್ಣನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ದಿನೇಶನ್,    ಪ್ರಶಾಂತ್ ಎಂಬಿವರಿದ್ದರು.

10 ದಿನಗಳೊಳಗೆ ಮೂರು ಕೋಳಿ ಅಂಕ ಕೇಂದ್ರಗಳಿಗೆ  ಮಂಜೇಶ್ವರ ಪೊಲೀಸರು ದಾಳಿ ನಡೆಸಿದ್ದಾರೆ. ಮೊದಲ ಎರಡು ದಾಳಿಗಳಲ್ಲಿ ಒಂದೂವರೆ ಲಕ್ಷ ರೂಪಾಯಿಯಷ್ಟು ಮೊತ್ತವನ್ನು ವಶಪಡಿಸಿ 10 ಮಂದಿಯನ್ನು ಸೆರೆಹಿಡಿದಿದ್ದಾರೆ.

ಜಿಲ್ಲೆಯ ಗಡಿ ಪ್ರದೇಶದ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಹಣವಿರಿಸಿ ಕೋಳಿ ಅಂಕ ನಡೆಯು ತ್ತಿದ್ದು, ಇಲ್ಲಿಗೆ ಕರ್ನಾಟಕದಿಂದಲೂ ಹಲವರು ತಲುಪುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇದರ ವಿರು ದ್ಧ ಕಠಿಣ ಕ್ರಮ ಕೈಗೊಳ್ಳುವುದಾ ಗಿಯೂ ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ.

RELATED NEWS

You cannot copy contents of this page