ಕಾಸರಗೋಡು: ದೀಪಾವಳಿ ಹಬ್ಬದ ಪ್ರಯುಕ್ತ ಜಿಲ್ಲೆಯಾದ್ಯಂತ ಪೊಲೀಸರು ಎಲ್ಲಾ ಪಟಾಕಿ ಅಂಗಡಿಗಳಿಗೆ ದಾಳಿ ಆರಂಭಿಸಿದ್ದಾರೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ವರಿಯಾಗಿ ದಾಸ್ತಾನಿರಿಸಲಾಗಿರುವ ಸುಡುಮದ್ದುಗಳ ಪತ್ತೆಗಾಗಿ ಪೊಲೀಸರು ಇಂತಹ ದಾಳಿ ಆರಂಭಿಸಿದ್ದಾರೆ. ಇದರಂತೆ ಅನಂತಪುರ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿರುವ ಪಟಾಕಿ ಅಂಗಡಿಯೊಂದಕ್ಕೆ ಕುಂಬಳೆ ಪೊಲೀಸರು ದಾಳಿ ನಡೆಸಿ ಅಲ್ಲಿ ಲೈಸನ್ಸ್ ಪ್ರಕಾರ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ದಾಸ್ತಾನಿರಿಸಲಾಗಿದ್ದ 4058.4 ಕಿಲೋ ಗ್ರಾಂ ಪಟಾಕಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಆ ಸಂಸ್ಥೆಯ ಮಾಲಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ರೀತಿ ಕಾಸರಗೋಡು ನಗರದ ಕೇಳುಗುಡ್ಡೆ ಸೇರಿದಂತೆ ಇತರ ಹಲವು ಪಟಾಕಿ ಅಂಗಡಿಗಳಲ್ಲೂ ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ. ಈ ಕುರಿತಾದ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಲು ಬಾಕಿಯಿದೆ.







