ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಇಬ್ಬರ ಬಂಧನ; 10 ಕೋಳಿಗಳ ವಶ

ಕಾಸರಗೋಡು: ಕುತ್ತಿಕೋಲ್ ಕಳಕ್ಕರದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಹತ್ತು ಕೋಳಿಗಳನ್ನು ವಶಕ್ಕೆ ತೆಗೆಯಲಾಗಿದೆ. ನಿನ್ನೆ ಸಂಜೆ 6 ಗಂಟೆ ವೇಳೆ ಬೇಡಗಂ ಎಸ್.ಐ. ಸುಮೇಶ್‌ರಾಜ್ ನೇತೃತ್ವದಲ್ಲಿ ಕೋಳಿ ಅಂಕಕ್ಕೆ ಪೊಲೀಸರು ಸುತ್ತುವರಿದಿದ್ದಾರೆ. ಜಿಲ್ಲಾ ಸ್ಪೆಶಲ್ ಬ್ರಾಂಚ್‌ನ ವರದಿಯ ಆಧಾರದಲ್ಲಿ ಈ ಪ್ರದೇಶದ ಮೇಲೆ ಪೊಲೀಸರು ನಿಗಾಯಿರಿಸಿದ್ದರು. ಕೋಳಿ ಅಂಕ ನಡೆಯುತ್ತಿದೆ ಎಂದು ಖಚಿತಪಡಿಸಿದ ಬಳಿಕ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಪೊಲೀಸರನ್ನು ಕಂಡೊಡನೆ ಕೋಳಿ ಅಂಕದಲ್ಲಿ ನಿರತರಾಗಿದ್ದವರು ಪರಾರಿ ಯಾಗಿದ್ದರು.

ಈ ಮಧ್ಯೆ ಕುತ್ತಿಕೋಲ್ ಚಾಯಿತ್ತಡ್ಕದ ರಾಜನ್, ಕಳಕ್ಕರದ ಸುಧಾಕರನ್ ಎಂಬಿವರನ್ನು ಬಂಧಿಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಂದು ಮೊಬೈಲ್ ಫೋನ್ ಹಾಗೂ 1000 ರೂ. ಮೊತ್ತವನ್ನು  ಕಸ್ಟಡಿಗೆ ತೆಗೆದುಕೊಂಡಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ತಂಡದಲ್ಲಿ ಎಸ್.ಐ. ಸಿ. ಸದಾಶಿವನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ರಜೀಶ್, ಸಿಪಿಒಗಳಾದ ಸುರೇಶ್, ನಿಶಾಂತ್, ವಿಶ್ವಂಭರನ್, ಶ್ರೀಜಿತ್ ಎಂಬಿವರಿದ್ದರು.

You cannot copy contents of this page