ಆಪರೇಷನ್ ಸೆ.ಹಂಟ್: ಜಿಲ್ಲೆಯಾದ್ಯಂತ ಪೊಲೀಸ್ ದಾಳಿ: 33 ಸೈಬರ್ ಅಪರಾಧ ಪ್ರಕರಣ ದಾಖಲು, 18 ಮಂದಿ ಸೆರೆ

ಕಾಸರಗೋಡು: ಸೈಬರ್  ಮೂಲಕ ನಡೆಸುತ್ತಿರುವ ಆರ್ಥಿಕ ಅಪರಾಧ ಪ್ರಕರ ಣಗಳನ್ನು ತಡೆಗಟ್ಟಲು ಜಿಲ್ಲೆಯಾದ್ಯಂ ತವಾಗಿ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಸೈಬರ್ ಅಪರಾಧ ಪ್ರಕರಣಗಳ 18 ಮಂದಿಯನ್ನು ಸೆರೆ ಹಿಡಿದಿದ್ದಾರೆ. ಆಪರೇಷನ್ ಸೆ.ಹಂಟ್ (5.0)ನಂತೆ ಈ ಕಾರ್ಯಾಚರಣೆ ನಡೆಸಲಾಗಿದೆ. ಇದರಂತೆ ಕಾಸರಗೋಡು ಪೊಲೀಸರು ನಡೆಸಿದ ದಾಳಿಯಲ್ಲಿ ಒಟ್ಟು ಐದು ಪ್ರಕರಣಗಳನ್ನು ದಾಖಲಿಸಿಕೊಂ ಡಿದ್ದು, ಅದಕ್ಕೆ ಸಂಬಂಧಿಸಿ ಐದು ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ ನಂತರ ಓರ್ವನಿಗೆ  ಜಾಮೀನು ಮಂಜೂರು ಮಾಡಲಾಯಿತು.

ಇದೇ ರೀತಿ ವಿದ್ಯಾನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಂತಹ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿ ದ್ದಾರೆ. ಇದಕ್ಕೆ ಸಂಬಂಧಿಸಿ ಮಧೂರಿನ ಕ್ವಾರ್ಟರ್ಸ್ ಒಂದರಲ್ಲಿ ವಾಸಿಸುತ್ತಿರುವ ಅಜ್ಮಲ್ ಅಲಿ (23), ಚೆಂಗಳ ಬಂಬ್ರಾಣಿನಗರದ ಅಬ್ದುಲ್ ರಹಿಮಾನ್ (40) ಮತ್ತು ಉಳಿಯತ್ತಡ್ಕದ ಮೊಹಮ್ಮದ್ ಯಾಸಿಮ್ (22) ಎಂಬವರನ್ನು ಬಂಧಿಸಿದ್ದಾರೆ. ಈ ನಾಲ್ಕು ಪ್ರಕರಣಗಳ ಪೈಕಿ ಒಂದರಲ್ಲಿ ಓರ್ವೆ ಮಹಿಳೆಯನ್ನು ಆರೋಪಿಯನ್ನಾಗಿ ಸೇರ್ಪಡೆಗೊಳಿಸಲಾಗಿದೆ.

ಇದೇ ರೀತಿ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಇಂತಹ ಐದು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅದಕ್ಕೆ ಸಂಬಂಧಿಸಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಪೊಲೀಸರು ಇಂತಹ 5 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಐದು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ಮೂವರನ್ನು ಬಂಧಿಸಲಾಗಿದ್ದು, ನಂತರ ಇಬ್ಬರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಈ ಪೈಕಿ ಒಂದು ಪ್ರಕರಣದಲ್ಲಿ  ಆರೋಪಿಯಾಗಿರುವ ಕುಂಬಳೆ ದೇವಿನಗರ ಸುನಾಮಿ ಕಾಲನಿಯ ನೌಫಾಸ್ (30)ಎಂಬಾತನನ್ನು  ಪೊಲೀಸರು ಬಂಧಿಸಿ ನಂತರ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಯಿತು. ಈ ಪ್ರಕರಣಗಳಲ್ಲಿ ಇಬ್ಬರು ಅಪ್ರಾಪ್ತರೂ ಒಳಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸೈಬರ್ ಮೂಲಕ ಆರ್ಥಿಕ ವಂಚನೆ ನಡೆಸಲು ಉಪಯೋಗಿಸಲಾಗು ತ್ತಿರುವ ೩೦ರಷ್ಟು ಇಲೆಕ್ಟ್ರೋನಿಕ್ ಉಪಕರಣಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂತಹ ಸೈಬರ್ ವಂಚನೆ ಮೂಲಕ ಲಕ್ಷಾಂತರ ರೂಪಾಯಿಗಳ ವಂಚನೆ ನಡೆಸಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಮೇಲ್ಪರಂಬ ಪೊಲೀಸ್ ಠಾಣೆ ಯಲ್ಲೂ ಇಂತಹ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂ ಬಂಧಿಸಿ ಬಂಧಿತರಾದವರೆಲ್ಲ್ಲಾ 20ರಿಂದ 25ರ ಮಧ್ಯ ವಯಸ್ಸಿನವರಾಗಿದ್ದಾರೆ.

ಇದರಲ್ಲಿ ಮೂವರು ಮಹಿಳೆಯರೂ ಒಳಗೊಂಡಿದ್ದಾರೆ. ಸೈಬರ್ ವಂಚಕರಿಗೆ ಆರ್ಥಿಕ ವಂಚನೆ ನಡೆಸಲು ತಮ್ಮ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ನೀಡುತ್ತಿರುವ ವಿದ್ಯಾರ್ಥಿಗಳೂ ಇಂತಹ ಪ್ರಕರಣದ ಆರೋಪಿಗಳಲ್ಲಿ ಒಳಗೊಂಡಿದ್ದಾರೆ. ಇವರು ಮ್ಯೂಲ್ ಅಕೌಂಟ್‌ನ ಮೂಲಕ ತಮ್ಮ ಜೇಬು ಖರ್ಚಿಗಾಗಿ  ಸೈಬರ್ ವಂಚಕರಿಗೆ ತಮ್ಮ ಬ್ಯಾಂಕ್ ಖಾತೆಯನ್ನು ಬಾಡಿಗೆ ನೀಡಿ ಅದಕ್ಕಾಗಿ ಸೈಬರ್ ವಂಚಕರಿಂದ ಕಮಿಷನ್ ರೂಪದಲ್ಲಿ ಹಣ ಪಡೆಯುತ್ತಾರೆ. 

ಇದಕ್ಕಾಗಿ ಇಂತಹ ಕೆಲವು ವಿದ್ಯಾರ್ಥಿಗಳು ತಮ್ಮ ಹೆತ್ತವರ ಬ್ಯಾಂಕ್ ಖಾತೆಗಳನ್ನು ಉಪಯೋಗಿಸುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಆನ್‌ಲೈನ್ ಗೇಮಿಂಗ್, ನಕಲಿ  ಆನ್‌ಲೈನ್ ಸಾಲ, ವಿದೇಶಿ ಉದ್ಯೋಗ ಇತ್ಯಾದಿ ಭರವಸೆಗಳನ್ನು ನೀಡಿ ಆನ್‌ಲೈನ್ ಮೂಲಕ ಹಣ ಎಗರಿಸು ತ್ತಿರುವುದು ಸೈಬರ್ ವಂಚಕರ ಪ್ರಧಾನ ಕಸುಬಾಗಿದೆ. ಇಂತಹ ಕಾರ್ಯಾಚರಣೆ ಮುಂದಿನ ದಿನಗಳಲ್ಲಿ ಇನ್ನೂ ನಡೆ ಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page