ಕಾಸರಗೋಡು: ಬೇಕಲ ಬೀಚ್ ನಲ್ಲಿ ಭೀತಿ ಸೃಷ್ಟಿಸುವ ರೀತಿಯಲ್ಲಿ ಚಲಾಯಿಸಿದ ಜೀಪನ್ನು ಬೇಕಲ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಂ.ವಿ. ಶ್ರೀದಾಸ್ ನೇತೃತ್ವದ ಪೊಲೀಸರು ವಶಕ್ಕೆ ತೆಗೆದುಕೊಂ ಡಿದ್ದಾರೆ.
ಬೇಕಲ ಕೋಟೆಯಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಸೇರಿದ ವೇಳೆ ಅಲ್ಲಿ ಭೀತಿ ಸೃಷ್ಟಿಸುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಈ ಜೀಪನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಶಕ್ಕೆ ತೆಗೆದ ವಾಹನವನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು. ಅದರ ಮಾಲಕನಿಗೆ ನೋಟೀಸು ಜ್ಯಾರಿಗೊ ಳಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.