ಮಧೂರು: ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸುತ್ತಿರುವುದು, ಕೇಂದ್ರ ಯೋಜನೆಗಳನ್ನು ಬುಡಮೇಲುಗೊಳಿಸು ತ್ತಿರುವುದು ಕೇರಳದಲ್ಲಿ ಮಾತ್ರವೆಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಯುವಮೋರ್ಚಾ ಯೂನಿಟ್ ರೂಪೀಕರಣದ ಅಂಗವಾಗಿ ಮಧೂರು ಪಂಚಾಯತ್‌ನ ಕೇಳುಗುಡ್ಡೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರ ಸರಕಾರದೊಂದಿಗಿರುವ ಅಭಿಪ್ರಾಯ ಭಿನ್ನತೆಯಿಂದಾಗಿ ಜನರಿಗೆ ಉಪಕಾರಪ್ರದವಾಗುವ ಹಲವಾರು ಯೋಜನೆಗಳು, ಅಭಿವೃದ್ಧಿ ಯೋಜನೆಗಳನ್ನು ಮೊಟಕುಗೊಳಿಸಲು ಯತ್ನ ನಡೆಯುತ್ತಿದೆ.
ಪಿಣರಾಯಿ ವಿಜಯನ್ ಸರಕಾರದ 10 ವರ್ಷದ ಆಡಳಿತ ಕೇರಳವನ್ನು ದೊಡ್ಡ ಸಾಲದ ಕೂಪಕ್ಕೆ ತಳ್ಳಿದೆ ಎಂದು ಅವರು ಆರೋಪಿಸಿದರು. ಈ ಸಂದಿಗ್ಧತೆಯನ್ನು ಹಿಮ್ಮೆಟ್ಟಿಸಲು ಎಡಬಲ ಒಕ್ಕೂಟಗಳಿಗೆ ಬದಲಾಗಿ ಬಿಜೆಪಿ ಅಧಿಕಾರಕ್ಕೇರಬೇಕಾಗಿದೆ ಎಂದು ಅಶ್ವಿನಿ ನುಡಿದರು. ಯುವಮೋರ್ಚಾ ಕಾಸರಗೋಡು ಜಿಲ್ಲಾ ಅಧ್ಯಕ್ಷ ಅಶ್ವಿನ್, ಕೇಳುಗುಡ್ಡೆ ವಾರ್ಡ್ ಜನಪ್ರತಿನಿಧಿ ಸೌಮ್ಯ ದಿನೇಶ್, ಶ್ರೀಧರನ್, ಪ್ರದೀಪ್ ಮಾತನಾಡಿದರು.







