ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರೀಟ್ ಬೀಮ್‌ನ ಒಂದು ಭಾಗ ಕುಸಿತ ಪ್ರಯಾಣಿಕರು ಅದೃಷ್ಟವಶಾತ್ ಪಾರು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಳ ಬಸ್ ನಿಲ್ದಾಣ ಸಮೀಪ ಮೇಲ್ಸೇತುವೆಯ ಅಡಿಭಾಗದ ಕಾಂಕ್ರೀಟ್ ಭೀಮ್‌ನ ಒಂದು  ಭಾಗ ಕುಸಿದು ಬಿದ್ದಿದೆ. ಇದೇ ಸಮಯದಲ್ಲಿ ಮೇಲ್ಸೇತುವೆಯ ಕೆಳ ಭಾಗದ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಅದೃಷ್ಟವಶಾತ್ ಅವುಗಳ ಮೇಲೆ ಕಾಂಕ್ರೀಟ್ ತುಂಡು ಬೀಳದಿರುವುದರಿಂದ ಭಾರೀ ಅಪಾಯ ತಪ್ಪಿ ಹೋಗಿದೆ.

ನಾಲ್ಕು ತಿಂಗಳ ಹಿಂದೆಯಷ್ಟೇ ಇಲ್ಲಿ ಮೇಲ್ಸೇತುವೆ ಕೆಲಸ ಪೂರ್ಣಗೊಂಡಿತ್ತು. ಹಲವು ವಾಹನಗಳು ಮೇಲ್ಸೇತುವೆ ಹಾಗೂ ಕೆಳಗಿನ ರಸ್ತೆಯಲ್ಲಿ ಸಂಚರಿಸುತ್ತಿದೆ. ಇದೀಗ ಈ ಮೇಲ್ಸೇತುವೆಯ ಕಾಂಕ್ರೀಟ್ ತುಂಡು ಬಿದ್ದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಊರಾಲುಂಗಲ್ ಲೇಬರ್  ಕಾಂಟ್ರಾಕ್ಟ್ ಕೋ ಆಪರೇಟಿವ್ ಸೊಸೈಟಿ ರಾಷ್ಟ್ರೀಯ ಹೆದ್ದಾರಿಯ ಒಂದನೇ ರೀಚ್‌ನ ಗುತ್ತಿಗೆ ವಹಿಸಿಕೊಂಡಿತ್ತು.

You cannot copy contents of this page