ಪ್ರತಾಪನಗರ ಲೋಕೋಪಯೋಗಿ ಇಲಾಖೆ ರಸ್ತೆ ಹದಗೆಟ್ಟು ಸಂಚಾರ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಸೋಂಕಾಲು-ಪ್ರತಾಪನಗರದ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಹದಗೆಟ್ಟು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗು ತ್ತಿರುವುದಾಗಿ ನಾಗರಿಕರು ದೂರಿದ್ದಾರೆ. ರಸ್ತೆಯಲ್ಲಿರುವ ಹೊಂಡಗಳಲ್ಲಿ ಮಳೆ ನೀರು ಸಂಗ್ರಹಗೊAಡಿರುವುದರಿAದ ಸಂಚಾರದ ವೇಳೆ ದ್ವಿಚಕ್ರ, ತ್ರಿಚಕ್ರ ವಾಹನಗಳು ಹೊಂಡದಲ್ಲಿ ಸಿಲುಕಿ ಹಾನಿಗೀಡಾಗುತ್ತಿದೆ. ಈ ರಸ್ತೆ ಶಿಶು ಮಂದಿರ ಹಾಗೂ ಬೀಟಿಗದ್ದೆ ಪರಿಸರದಲ್ಲಿ ಶೋಚನೀಯವಸ್ಥೆಗೆ ತಲುಪಿದೆ.
ಎರಡು ವಾರದ ಹಿಂದೆ ಜಲ್ಲಿಕಲ್ಲುಗಳನ್ನು ತಂದು ಹಾಕಲಾ ಗಿದೆ. ಆದರೆ ಅದನ್ನು ಸಮತಟ್ಟು ಗೊಳಿಸಲಿಲ್ಲ, ಡಾಮಾ ರೀಕರಣ ಗೊಳಿಸಲಿಲ್ಲ. ಇದರಿಂದ ಜಲ್ಲಿ ಕಲ್ಲು ಎದ್ದು ವಾಹನ ಸಂಚಾರ ಹಾಗೂ ಉರವರಿಗೆ ನಡೆದಾಡಲು ಸಂಕಷ್ಟ ಉಂಟಾಗುತ್ತಿದೆ. ಸೋಂಕಾಲಿನಿAದ ಪ್ರತಾಪನಗರ ದಾರಿಯಾಗಿ ಶಾಂತಿಗುರಿ ಮೂಲಕ ಹೆದ್ದಾರಿಗೆ ಸಂಪರ್ಕಿಸುವ ಈ ರಸ್ತೆಯಲ್ಲಿ ದಿನನಿತ್ಯ ಶಾಲಾ ವಾಹನ ಸಹಿತ ಹಲವಾರು ವಾಹನಗಳು ಸಂಚರಿಸುತ್ತಿವೆ. ಅಧಿಕಾರಿಗಳು ಈ ರಸ್ತೆಯನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಊರವರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page