ಸ್ವಾತಂತ್ರ್ಯೋತ್ಸವಕ್ಕೆ ಮುಂಜಾಗ್ರತೆ : ಜಿಲ್ಲೆಯಾದ್ಯಂತ ಪೊಲೀಸರಿಂದ ಪರಿಶೀಲನೆ; ಸಮುದ್ರದಲ್ಲಿ ವಿಶೇಷ ಕಣ್ಗಾವಲು

ಕಾಸರಗೋಡು: ಸ್ವಾತಂತ್ರ್ಯೋ ತ್ಸವದಂಗವಾಗಿ ಮುಂಜಾಗ್ರತಾ ಕ್ರಮದಂತೆ  ಪೊಲೀಸರು ಜಿಲ್ಲೆಯಾದ್ಯಂತ ವ್ಯಾಪಕ ತಪಾಸಣೆ ಹಾಗೂ ಪರಿಶೀಲನೆ ಆರಂಭಿಸಿದ್ದಾರೆ.

ಇದರಂತೆ ಜಿಲ್ಲೆಯ ಎಲ್ಲಾ ವಸತಿಗಳಿಗೆ ಸಾಗಿ ಪೊಲೀಸರು ಪರಿಶೀಲನೆ ನಡೆಸತೊಡಗಿದ್ದಾರೆ. ವಸತಿಗೃಹಗಳಲ್ಲಿ ಶಂಕಾಸ್ಪದ ರೀತಿಯಲ್ಲಿ ತಂಗಿದ್ದವರನ್ನು ಪೊಲೀಸರು ವಶಕ್ಕೆ ತೆಗೆದು ಪ್ರಶ್ನಿಸುತ್ತಿದ್ದಾರೆ. ಮರ್ಮಪ್ರಧಾನ ಕೇಂದ್ರ ಮತ್ತು ಸರಕಾರಿ ಕಚೇರಿಗಳ ಮೇಲೂ ಪೊಲೀಸರು ನಿಗಾ ಇರಿಸತೊಡಗಿದ್ದಾರೆ.

ಇದರ ಹೊರತಾಗಿ ಬಸ್ ನಿಲ್ದಾಣಗಳು, ಜನನಿಬಿಡ ಪ್ರದೇಶ, ರೈಲು ನಿಲ್ದಾಣಗಳನ್ನು ಪೊಲೀಸರು ಪದೇ ಪದೇ ಪರಿಶೀಲನೆ ನಡೆಸುತ್ತಿದ್ದಾರೆ.  ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಪ್ರಧಾನ ರಸ್ತೆಗಳಲ್ಲಿ ಪೊಲೀಸರು ಎಲ್ಲಾ ವಾಹನಗಳ ತಪಾಸಣೆಯಲ್ಲ್ಲೂ ತೊಡಗಿದ್ದಾರೆ.

ಇದರ ಹೊರತಾಗಿ ಸಮುದ್ರ ತೀರ ಪ್ರದೇಶಗಳಲ್ಲಿ  ತೀವ್ರ ನಿಗಾ ಇರಿಸಲಾಗಿದೆ. ಇದರಂತೆ ಕರಾವಳಿ ಪೊಲೀಸರು ಮತ್ತು ಕೋಸ್ಟ್ ಗಾರ್ಡ್ ಗಳು ಸಮುದ್ರದಲ್ಲಿ ಕಣ್ಗಾವಲು ಹಾಗೂ ಗಸ್ತು ತಿರುಗುವಿಕೆ ಆರಂಭಿ ಸಿದೆ. ಸಮುದ್ರದಲ್ಲಿ ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿರವ ಬೋಟ್, ದೋಣಿ ಇತ್ಯಾದಿಗಳನ್ನು  ವಿಶೇಷ ರೀತಿಯಲ್ಲಿ ತಪಾಸಣೆ ನಡೆಸಲಾಗುತ್ತಿದೆ.

ರೈಲು ನಿಲ್ದಾಣಗಳಿಗೆ ಆಗಮಿಸುವ ಪಾರ್ಸೆಲ್‌ಗಳು ಮತ್ತು ಬ್ಯಾಗೇಜ್‌ಗಳನ್ನು ತಪಾಸಣೆಗೊಳಪಡಿಸಲಾಗುತ್ತಿದೆ.

You cannot copy contents of this page