ಜೋಡುಕಲ್ಲು ಗಣೇಶ ಮಂದಿರ ಸಂರಕ್ಷಣೆಗಾಗಿ ಜಾಗೃತ ಹಿಂದೂ ಶಕ್ತಿ ಸಂಗಮ ನಾಳೆ

ಉಪ್ಪಳ : ಜೋಡುಕಲ್ಲು ಗಣೇಶ ಮಂದಿರ ಸಂರಕ್ಷಣೆ ಗಾಗಿ ಕಳೆದ ಹಲವು ದಿನಗಳಿಂದ ಸ್ಥಳದಲ್ಲಿ ನಿರಂ ತರ ಭಜನೆ, ಯಾಗ, ನಾಮ ಜಪ ಮೊದಲಾದ ಧಾರ್ಮಿಕ ಕಾರ್ಯ ಕ್ರಮಗಳು ನಡೆಯುತ್ತಿದೆ. ಅಲ್ಲದೆ ಮಂದಿರದ ಸಂರಕ್ಷಣೆಗಾಗಿ ಜೋಡು ಕಲ್ಲು ಚಲೋ ಜಾಗೃತಿ ಹಿಂದೂ ಶಕ್ತಿ ಸಂಗಮ ನಾಳೆ ಸಂಜೆ ೩ಗಂಟೆಗೆ ಜೋಡುಕಲ್ಲು ಜಂಕ್ಷನ್ ನಲ್ಲಿ ನಡೆಯಲಿದೆ. ಈಗಾಗಲೇ ಮಂ ದಿರಕ್ಕೆ ಕೊಂಡೆವೂರು ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ, ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ, ಒಡಿ ಯೂರು ಶ್ರೀ ಗುರುದೇವಾ ನಂದ ಸ್ವಾಮೀಜಿ ಭೇಟಿ ನೀಡಿ ಆಶೀರ್ವ ಚನ ನೀಡಿದ್ದಾರೆ.ಅಲ್ಲದೆ ಹಲ ವಾರು ಧಾರ್ಮಿಕ ಮುಖಂಡರು ಭೇಟಿ ನೀಡಿ ಮಾರ್ಗ ದರ್ಶನ ನೀಡಿದ್ದಾರೆ. ಸ್ಥಳಕ್ಕೆ ದಿನನಿತ್ಯ ಸಾವಿರಾರು ಭಕ್ತರು ತಲುಪಿ ಮಂದಿರ ಸಂರಕ್ಷಣೆಗಾಗಿ ಸೇರಿ ಕೊಂಡಿದ್ದಾರೆ. ಅಲ್ಲದೆ ನಾಳೆ ನಡೆಯುವ ಹಿಂದೂ ಶಕ್ತಿ ಸಂಗಮ ಕಾರ್ಯಕ್ಕೆ ಪರಿಸರ ಶುಚೀಕರಣ ಭರದಿಂದ ನಡೆಯುತ್ತಿದೆ.

RELATED NEWS

You cannot copy contents of this page