ಪ್ರಿಯವಾದ ಪ್ರಿಯದರ್ಶಿನಿ ಉಚಿತ ಪ್ರಯಾಣ: ವಿವಿಧ ಕಡೆ ಪ್ರಯಾಣಿಕರಿಗೆ ಸಂಚಾರ ಸಮಸ್ಯೆ

ಕಾಸರಗೋಡು: ಕೆಎಸ್‌ಆರ್ ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿದ ನಂತರದ ೧೫ ದಿನ ಗಳಲ್ಲಾಗಿ ಜಿಲ್ಲೆಯಲ್ಲಿ 9.18 ಲಕ್ಷದಷ್ಟು ಮಹಿಳೆಯರು ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಅಂದರೆ ಇದರ ಟಿಕೆಟ್‌ಗಳ ಬೆಲೆ 2.44 ಕೋಟಿ ರೂ. ಆಗಿದೆ. ಇದು ಕೆಎಸ್‌ಆರ್‌ಟಿಸಿಗೆ ನಷ್ಟ ಉಂಟಾಗಿದೆ.

ಕೆಎಸ್‌ಆರ್‌ಟಿಸಿಯ ಕಾಸರ ಗೋಡು ಮತ್ತು ಕಾಞಂಗಾಡ್ ಡಿಪ್ಪೋಗಳಲ್ಲಿ ಒಟ್ಟು 126 ಆರ್ಡಿ ನರಿ ಬಸ್‌ಗಳು ಸಂಚಾರ ನಡೆಸುತ್ತಿದ್ದು ಈ ಎಲ್ಲಾ ಬಸ್‌ಗಳಲ್ಲಿ ಮಹಿಳೆಯರು ಮಾತ್ರವಲ್ಲ ಮಂಗಳಮುಖಿಯರಿಗೂ ಉಚಿತವಾಗಿ ಪ್ರಯಾಣಿಸಬ ಹುದಾಗಿದೆ. ಬೆಳಿಗ್ಗೆ ಮತ್ತು ಸಂಜೆ ವಿದ್ಯಾರ್ಥಿನಿಯರು ಮತ್ತು ಸರಕಾರಿ ಕಚೇರಿಗಳ ಮಹಿಳಾ ಸಿಬ್ಬಂದಿಗಳ ಬಾರೀ ನಿಬಿಢತೆಯೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕಾಣಬಹುದಾಗಿದೆ.

ಕಾಸರಗೋಡಿನಿಂದ ಮಂಗಳೂರು, ಸುಳ್ಯ, ಪುತ್ತೂರು ಬಸ್‌ಗಳಲ್ಲಿ  ಜಿಲ್ಲೆಯವರು ಮಾತ್ರವಲ್ಲ  ಕರ್ನಾಟಕದ ಮಹಿಳೆಯರು ಕಿಕ್ಕಿರಿದು ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿರುವುದು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ವತಿಯಿಂದಲೂ ಕೆಎಸ್‌ಆರ್‌ಟಿಸಿಗೆ ಭಾರೀ ಆರ್ಥಿಕ ನಷ್ಟ ಉಂಟಾಗುತ್ತಿದೆ. ಉಚಿತ ಪ್ರಯಾಣ ಸೌಕರ್ಯ ಜ್ಯಾರಿಗೊಂಡ ದಿನದಿಂದ ಮುಂದಿನ 15 ದಿನಗಳೊಳಗಾಗಿ ಕೆಎಸ್‌ಆರ್‌ಟಿಸಿಯ ಕಾಸರಗೋಡು ಡಿಪ್ಪೋದ 72 ಆರ್ಡಿನರಿ ಬಸ್‌ಗಳಲ್ಲಿ 5,38,944 ಮಂದಿ ಮಹಿಳೆಯರು (1.53 ಕೋಟಿ ರೂ. ಟಿಕೆಟ್ ಮೌಲ್ಯ) ಹಾಗೂ ಕಾಞಂ ಗಾಡ್ ಸಬ್ ಡಿಪೋದ 54 ಬಸ್ ಗಳಲ್ಲಾಗಿ 3,79,656 (90.90 ಟಿಕೆಕ್ ಮೌಲ್ಯ) ಮಹಿಳೆಯರು ಉಚಿತವಾಗಿ ಪ್ರಯಾಣ ನಡೆಸಿದ್ದಾ ರೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಪ್ರಿಯದರ್ಶಿನಿ ಇಷ್ಟು ಪ್ರಿಯವಾ ದಾಗ ನಿತ್ಯವೂ ಸಂಚರಿಸುವ ಹಲವು ಮಂದಿಗೆ ಅಪ್ರಿಯವಾಗಿರುವುದು ಸುಳ್ಳಲ್ಲ. ಕೆಎಸ್‌ಆರ್‌ಟಿಸಿ ಮಾತ್ರವೇ ಸಂಚರಿಸುವ ರೂಟ್‌ಗಳಲ್ಲಿ ಪುರುಷರು ಹಾಗೂ ಮಕ್ಕಳು ಸಹಿತ ಮಹಿಳೆಯರು ಸಂಚರಿ ಸಬೇಕಿದ್ದರೆ ಭಾರೀ ತ್ರಾಸಪಡಬೇಕಾದ ಸ್ಥಿತಿ ಉಂಟಾಗಿದೆ. ಎಲ್ಲಾ ಬಸ್‌ಗಳು ಕಿಕ್ಕಿರಿದು ಪ್ರಯಾಣಿಕರನ್ನು ತುಂಬಿಸಿ ಸಾಗುತ್ತಿರುವಾಗ ಕೆಲವೊಂದು ತಂಗು ದಾಣಗಳಲ್ಲಿ ನಿಲ್ಲಿಸದೆ ಸಂಚರಿಸುತ್ತಿವೆ. ಇದರಿಂದ ಇಲ್ಲಿನವರಿಗೆ ಸಮಸ್ಯೆಯಾ ಗುತ್ತಿದೆ. ಮಂಗಳೂರು-ಕಾಸರಗೋಡು ರೂಟ್‌ನಲ್ಲಿ ನಿರ್ದಿಷ್ಟ ಗಂಟೆಗಳಿಗೆ ಕೇರಳ-ಕರ್ನಾಟಕದ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ಸಂಜೆ 4ರ ಬಳಿಕ ಮಂಗಳೂರಿನಿಂದ ಕಾಸರ ಗೋಡಿಗೆ ಕೇರಳ ಎಸ್‌ಆರ್‌ಟಿಸಿ ಬಸ್ ಮಾತ್ರವೇ ಸಂಚರಿಸುತ್ತಿದ್ದು, ಈ ವೇಳೆ ಪಂಪ್‌ವೆಲ್‌ನಿಂದ ಉಪ್ಪಳ ವರೆಗಿರುವ ನಿಲುಗಡೆಗಳಲ್ಲಿ ಬಸ್ ಹತ್ತಲು ಸಾಧ್ಯವಾಗುತ್ತಿಲ್ಲವೆಂದು ದೂರಲಾಗಿದೆ. ಬಸ್‌ನ ಮಿತಿಗಿಂತಲೂ ಹೆಚ್ಚು ಜನ ಸಂಚರಿಸುತ್ತಿರುವಾಗ ಕೆಲವು ಕಡೆಗಳಲ್ಲಿ ಇಳಿಯಲು, ಹತ್ತಲು ಕೂಡಾ ಅಸಾಧ್ಯವಾಗುತ್ತಿದೆ.

You cannot copy contents of this page