ಕಾಸರಗೋಡು: ರಾಜ್ಯದಲ್ಲಿ ಇದೀಗ ಯುಡಿಎಫ್ ಪರವಾದ ಅಲೆ ಬೀಸುತ್ತಿದೆ ಎಂದು ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಂಞಾಲಿಕುಟ್ಟಿ ತಿಳಿಸಿದ್ದಾರೆ. ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ಅವರು ಸ್ಥಳೀಯಾಡಳಿತ ಚುನಾವಣೆಗೆ ಸಂಬಂಧಿಸಿ ಮಾತನಾಡುತ್ತಿದ್ದರು. ಪಂಚಾಯತ್ ಚುನಾವಣೆಯಲ್ಲಿ ರಾಜಕೀಯಕ್ಕಿಂತಲೂ ಹೆಚ್ಚಾಗಿ ಪ್ರಾದೇಶಿಕ ವಿಷಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಹಾಗಿದ್ದರೂ ಈ ಬಾರಿ ಪಂಚಾಯತ್ ಚುನಾವಣೆ ಯಲ್ಲಿ ಮತ ದಾರರಿಂದ ಯುಡಿಎಫ್‌ಗೆ ಅನುಕೂಲ ವಾದ ತೀರ್ಪು ಉಂಟಾ ಗಲಿದೆ ಎಂದು ಕುಂಞಾಲಿ ಕುಟ್ಟಿ ತಿಳಿಸಿದ್ದಾರೆ. ಎಡರಂಗ ಸರಕಾರದ ಚಟುವಟಿಕೆ ಕಳಪೆಯಾಗಿದೆ. ಆದ್ದರಿಂದ ಕೇರಳದಲ್ಲಿ ರಾಜಕೀಯ ಬದಲಾವಣೆ ಉಂಟಾಗುವುದು ಖಚಿತ. ಶಬರಿಮಲೆ ವಿಷಯ ಜನರಿಗೆ ಭಾರೀ ನೋವುಂಟು ಮಾಡಿದೆ. ಒಮ್ಮೆ ಕೂಡಾ ಸಂಭವಿಸಕೂ ಡದಾದ ಪ್ರಕರಣಗಳು ಶಬರಿಮಲೆಯಲ್ಲಿ ನಡೆದಿದೆ. ಅದರ ನೋವು ಜನರಿಂದ ದೂರವಾಗಲು ಭಾರೀ ಸಮಯ ಬೇಕಾಗಿಬರಲಿದೆ ಎಂದು ಕುಂಞಾಲಿಕುಟ್ಟಿ ತಿಳಿಸಿದ್ದಾರೆ. ಶಾಸಕ ಎನ್.ಎ. ನೆಲ್ಲಿಕುನ್ನು, ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹಮಾನ್ ಮೊದಲಾದವರು ಉಪಸ್ಥಿತರಿದ್ದರು.







