ಕುಂಬಳೆ ಟ್ರಾಫಿಕ್ ಪರಿಷ್ಕಾರದಿಂದ ಸಮಸ್ಯೆ : ಪಂ. ಕಾರ್ಯದರ್ಶಿಗೆ ಸಿಪಿಎಂ ಮನವಿ

ಕುಂಬಳೆ: ಪೇಟೆಯಲ್ಲಿ ನೂತನವಾಗಿ ಆರಂಭಿಸಿದ ಟ್ರಾಫಿಕ್ ಪರಿಷ್ಕಾರದಿಂದಾಗಿ ಜನರು ಸಂಕಷ್ಟದ ಲ್ಲಿದ್ದಾರೆಂದು ಸಿಪಿಎಂ ಕುಂಬಳೆ ಲೋಕಲ್ ಸಮಿತಿ ಆರೋಪಿಸಿದೆ. ಬದಿಯಡ್ಕ ಭಾಗಕ್ಕೆ ತೆರಳುವ ಬಸ್‌ಗಳು ಜನರನ್ನು  ಇಳಿಸುವುದು, ಹತ್ತಿಸುವುದು ಕುಂಬಳೆ ಪೇಟೆಯಿಂದ ಸುಮಾರು 200 ಮೀಟರ್ ದೂರದಲ್ಲಾಗಿದೆ. ಇದರಿಂದಾಗಿ ಹಿರಿಯರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಆದುದರಿಂದ ಬಸ್ ಹತ್ತಿಸಲು, ಇಳಿಸಲು ಈ ಮೊದಲು ಇದ್ದಂತಹ ವ್ಯವಸ್ಥೆಯನ್ನು ಮುಂದುವರಿಸ ಬೇಕೆಂದು ಕುಂಬಳೆಯ ಟ್ರಾಫಿಕ್ ಪರಿಷ್ಕರಣೆಗೆ ತಜ್ಞರನ್ನು ಸೇರಿಸಿ ಸರ್ವಪಕ್ಷ ಸಭೆ ನಡೆಸಬೇಕೆಂದು  ಸಿಪಿಎಂ ಕುಂಬಳೆ ಲೋಕಲ್ ಸಮಿತಿ ಪಂಚಾಯತ್ ಕಾರ್ಯದರ್ಶಿಗೆ ಮನವಿ ನೀಡಿದೆ.

RELATED NEWS

You cannot copy contents of this page