ಹವಾಮಾನ ವೈಪರೀತ್ಯದಿಂದ ಉತ್ಪಾದನೆ ಕುಂಠಿತ : ಬೆಲೆ ಕಡಿಮೆಯಾಗದ ಹಣ್ಣು ಹಂಪಲು

ಕುಂಬಳೆ: ಹಣ್ಣು ಹಂಪಲುಗಳ ಬೆಲೆಯಲ್ಲಿ ಕಳೆದ ಹಲವು ತಿಂಗಳುಗಳಿAದ ಯಾವುದೇ ಕಡಿಮೆಯಾಗದೆ ಅದೇ ರೀತಿ ಮುಂದುವರಿಯುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಹಣ್ಣು ಹಂಪಲುಗಳ ಉತ್ಪಾದನೆ ಕುಂಠಿತಗೊAಡಿರುವುದಾಗಿ ರಖಂ ವ್ಯಾಪಾರಿಗಳು ತಿಳಿಸುತ್ತಿದ್ದಾರೆ. ನಾಡಿನಲ್ಲಿ ಮಾವಿನಹಣ್ಣು ಸೀಸನ್ ಕೊನೆಗೊಂಡೊಡನೆ ಇತರ ಹಣ್ಣು ಹಂಪಲುಗಳು ಭಾರೀ ಪ್ರಮಾಣದಲ್ಲಿ ಮಾರುಕಟ್ಟೆಗೆ ತಲುಪತೊಡಗಿದೆ. ಆದರೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಪ್ರತೀ ಹಣ್ಣುಗಳಿಗೆ ಅದರ ಗುಣಮಟ್ಟಕ್ಕೆ ಅನುಸರಿಸಿ ಬೆಲೆ ನಿಗದಿಪಡಿಸಲಾಗುತ್ತಿದೆ. ಆಪಲ್ನ್ನೇ ಮೂರು ವಿಧವಾಗಿ ವಿಭಜಿಸಲಾಗಿದೆ. ಇದಕ್ಕೆ 120ರಿಂದ 200 ರೂ. ವರೆಗೆ ಬೆಲೆಯಿದೆ. ಹವಾಮಾನ ವೈಪರೀ ತ್ಯದಿಂದ ಉತ್ಪಾದನೆ ಕಡಿಮೆಯಾದ ರಂಬೂಟಾನ್ಗೆ ಈಗಲೂ 320 ರೂ. ಆಗಿದೆ. ಒಮ್ಮೆ ಒ 80 ರೂ.ಗೆ ತಲುಪಿದ್ದು ನೇಂದ್ರ ಬಾಳೆಹಣ್ಣು ಬೆಲೆ ಈಗ 50ಕ್ಕಿಳಿದಿದೆ. ಕಪ್ಪುದ್ರಾಕ್ಷೆಗೆ 60, ಬಿಳಿ ದ್ರಾಕ್ಷೆಗೆ 100, ಕಲ್ಲಂಗಡಿಗೆ 32, ಅನನಾಸು 70, ಪಪ್ಪಾಯಿ 50, ಕಿವಿ 140, ದಾಳಿಂಬೆ 140, ಡ್ರಾಗನ್ 130, ಪೇರಳೆಗೆ 60ರಿಂದ 100, ಕಿತ್ತಳೆಗೆ 50 ಎಂಬೀ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಬೆಲೆಯಿದೆ.

You cannot copy contents of this page