ಪೆರ್ಲ: ಬೇಂಗಪದವು ಸಮೀಪದ ಕಲ್ಲರೋಡಿ ನಿವಾಸಿ, ಪ್ರಗತಿಪರ ಕೃಷಿಕ ಲೂವಿಸ್ ಡಿಸೋಜಾ (76) ನಿನ್ನೆ ನಿಧನ ಹೊಂದಿದರು. ಬೆಳಿಗ್ಗೆ ಅಸ್ವಸ್ಥಗೊಂಡಿದ್ದ ಇವರನ್ನು ಆಸ್ಪತ್ರೆಗೆ ತಲುಪಿಸಲಾಗಿತ್ತು. ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ.
ಮೃತರು ಪತ್ನಿ ಸಿಸಿಲಿಯಾ ಡಿಸೋಜಾ, ಮಕ್ಕಳಾದ ಮ್ಯಾಕ್ಸಿಮ್, ಫಾದರ್ ಮೆಲ್ವಿನ್ (ಪಂಜ ಚರ್ಚ್‌ನ ಧರ್ಮಗುರು), ಮಿಲ್ಟನ್ ಪೀಟರ್, ಸೊಸೆಯಂದಿರಾದ ಲವೀನಾ, ಪ್ರೀತಿಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮಣಿಯಂಪಾರೆ ಸೈಂಟ್‌ಲಾರೆನ್ಸ್ ಚರ್ಚ್‌ನಲ್ಲಿ ಇಂದು ಅಂತ್ಯ ಸಂಸ್ಕಾರ ಜರಗಿತು.