ನಿಷೇಧಿತ ಉತ್ಪನ್ನ ವಶಪಡಿಸಿ ದಂಡ ವಸೂಲಿ

ಕಾಸರಗೋಡು: ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್ ಮೆಂಟ್ ಸ್ಕ್ವಾಡ್ ಮಧೂರು ಪಂಚಾಯತ್ ವ್ಯಾಪ್ತಿಯಲ್ಲಿ ನಡೆಸಿದ ತಪಾಸಣೆಯಲ್ಲಿ ಹೈಪರ್ ಮಾರ್ಕೆ ಟ್‌ನಲ್ಲಿ ಮಾರಾಟಕ್ಕಾಗಿ ತೆಗೆದಿರಿಸಿದ್ದ ಏಕಬಾರಿ ಉಪಯೋಗಿಸುವಂತಹ ನಿಷೇಧಿತ ಪ್ರೇಟ್‌ಗಳು, ಗ್ಲಾಸ್‌ಗಳನ್ನು ವಶಪಡಿಸಲಾಯಿತು. ಅಂಗಡಿ ಮಾಲಕನಿಗೆ 1೦,೦೦೦ ರೂ. ದಂಡ ಹೇರಲಾಯಿತು. ಮಧೂರು ಬ್ಯಾಂಕ್ ಮುಂಭಾಗದಲ್ಲಿರುವ ತ್ಯಾಜ್ಯಗಳನ್ನು ರಸ್ತೆಯಲ್ಲಿ ಕಿಚ್ಚಿರಿಸಿ ನಾಶಪಡಿಸಿದ ಹಿನ್ನೆಲೆಯಲ್ಲಿ 5೦೦೦ ರೂ. ದಂಡ ವಸೂಲು ಮಾಡಲಾಯಿತು. ಹಿದಾಯತ್‌ನಗರದ ಶಾಲೆ, ಅಪಾರ್ಟ್‌ಮೆಂಟ್‌ಗಳಿಂದ ಪತ್ತೆಹಚ್ಚಿದ ಅವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆಗೂ ದಂಡ ಹೇರಲಾಯಿತು.

ಮಂಗಲ್ಪಾಡಿ ಪಂಚಾಯತ್‌ನ ಮೀಪಿರಿಯಲ್ಲಿರುವ ಕ್ವಾರ್ಟರ್ಸ್‌ಗಳಲ್ಲಿ, ವೊಕೇಶನ್ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ, ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ, ಅಂಗಡಿಗಳಲ್ಲಿ ನಡೆಸಿದ ತಪಾಸಣೆಯಲ್ಲಿ  ಅವೈಜ್ಞಾನಿಕವಾಗಿ ತ್ಯಾಜ್ಯವನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ 2೦,೦೦೦ ರೂ. ದಂಡ ಹೇರಲಾಗಿದೆ. ಅಲ್ಲದೆ ತ್ಯಾಜ್ಯಗಳನ್ನು ವಿಂಗಡಿಸಿ ಹಸಿರು ಕ್ರಿಯಾಸೇನೆಗೆ ನೀಡಲು ನಿರ್ದೇಶಿಸಲಾಯಿತು. ತಪಾಸಣೆಯಲ್ಲಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಲೀಡರ್ ಕೆ.ವಿ. ಮುಹಮ್ಮದ್ ಮದನಿ, ಸ್ಕ್ವಾಡ್ ಸದಸ್ಯ ವಿ.ಎಂ. ಜೋಸ್, ಅಬೂಬಕ್ಕರ್ ಸಿದ್ದಿಕ್, ಹೆಲ್ತ್ ಇನ್ಸ್‌ಪೆಕ್ಟರ್ ಎಂ. ಮೇಘ ಭಾಗವಹಿಸಿದರು.

RELATED NEWS

You cannot copy contents of this page