ವಿವಿಧ ಕಡೆಗಳಲ್ಲಿ ಸೌಹಾರ್ದತೆಯ, ಸಂಭ್ರಮದ ನಬಿ ದಿನಾಚರಣೆ

ಮಂಜೇಶ್ವರ: ಪ್ರವಾದಿ ಹಜರತ್ ಮುಹಮ್ಮದ್ ನಬಿ ಅವರ  ಜನ್ಮ ದಿನಾಚರಣೆಯಾದ ಈದ್ ಮಿಲಾದ್ ಉಲ್‌ನಬಿ ಆಚರಣೆ ವಿವಿಧ ಕಡೆಗಳಲ್ಲಿ ಸಂಭ್ರಮದಿಂದ ನಡೆಯಿತು. ಮಂಜೇಶ್ವರದಾದ್ಯಂತ ಮಸೀದಿಗಳಲ್ಲಿ ಮೌಲೂದ್ ಪಠನ, ಧಾರ್ಮಿಕ ಉಪ ನ್ಯಾಸಗಳು, ಪ್ರಾರ್ಥನೆ ಜರಗಿತು. ಬೀದಿ ಗಳಲ್ಲಿ ಮಕ್ಕಳು ಸಹಿತ ಪಾಲ್ಗೊಂಡ ಶೋಭಾಯಾತ್ರೆಗಳು ಜರಗಿತು. ಉದ್ಯಾವರ ಸಾವಿರ ಜಮಾಯತ್ ಜುಮಾ ಮಸೀದಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಮಾಯತ್ ಮದರೀಸ್ ಬಿ.ಎಂ. ಅಬ್ದುಲ್ ಖಾದರ್ ಮದನಿ ಪ್ರಾರ್ಥನೆ ನೆರವೇರಿಸಿದರು. ಅಧ್ಯಕ್ಷ ಸೈಫುಲ್ಲ ತಂಙಳ್ ಧ್ವಜಾರೋ ಹಣಗೈದರು. ಹಲವು ಪದಾಧಿಕಾರಿಗಳು ಭಾಗವಹಿಸಿದರು. ವಿದ್ಯಾರ್ಥಿಗಳಿಂದ ಮಿಲಾದ್ ರ‍್ಯಾಲಿ ಜರಗಿತು.

ಕುಂಜತ್ತೂರು ಜುಮಾ ಮಸೀದಿ, ಮಂಜೇಶ್ವರ ಪಾಂಡ್ಯಲ್ ಮಸೀದಿ, ಪೊಸೋಟ್ ಜುಮಾ ಮಸೀದಿ, ಬಂಗ್ರಮಂಜೇಶ್ವರ ಸೇರಿದಂತೆ ವಿವಿಧ ಕಡೆಗಳಲ್ಲಿ ನಬಿದಿನಾಚರಣೆ ಜರಗಿತು.

ಮೂಡಂಬೈಲು: ಸಂತಡ್ಕದಲ್ಲಿ ಜರಗಿದ ನಬಿದಿನಾಚರಣೆ ಮೆರವಣಿಗೆ ಯಲ್ಲಿ ಶ್ರೀ ಕ್ಷೇತ್ರ ಸಂತಡ್ಕದ ವತಿಯಿಂದ ಮುಸ್ಲಿಂ ಬಾಂಧವರಿಗೆ ಸಿಹಿ ವಿತರಿಸಿ ಸೌಹಾರ್ದತೆ ಮೆರೆಯಲಾಯಿತು. ಸಿಹಿ ವಿತರಣೆಗೆ ರಾಮಕೃಷ್ಣ ಸಂತಡ್ಕ, ರಾಜೇಶ್, ನಾರಾಯಣ ನೇತೃತ್ವ ವಹಿಸಿದರು.

You cannot copy contents of this page