ಕಾಸರಗೋಡು: ದೇಶದ ಐಕ್ಯತೆ ಹಾಗೂ ರಾಷ್ಟ್ರೀಯತೆಯನ್ನು ದುರ್ಬಲಗೊಳಿಸಲಿರುವ ಯತ್ನವಾಗಿದೆ ವಂದೇ ಮಾತರಂ ವಿರುದ್ಧದ ಪ್ರತಿಭಟನೆ ಎಂದು, ಇದರ ಹಿಂದಿರುವ ಶಕ್ತಿಗಳನ್ನು, ಆಶಯಗಳನ್ನು ಪತ್ತೆಹಚ್ಚಬೇಕೆಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ನುಡಿದರು. ವಂದೇ ಮಾತರಂನ 15೦ನೇ ವಾರ್ಷಿಕಾಚರ ಣೆಯಂಗವಾಗಿ ಕೇರಳ ಕೇಂದ್ರ ವಿವಿಯಲ್ಲಿ ಸಾಹಿತ್ಯ ಅಕಾಡೆಮಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಎಂಬಿವುಗಳ ಸಹಕಾರದೊಂದಿಗೆ ಆಯೋಜಿಸಿದ ದೇಶೀಯ ವಿಚಾರ ಗೋಷ್ಠಿಯ ಸಮಾರೋಪ ಸಮಾರಂ ಭದಲ್ಲಿ ಅವರು ಮಾತನಾಡುತ್ತಿದ್ದರು. ವಿಚಾರಗೋಷ್ಠಿ ವಿರುದ್ಧ ವಿ.ವಿಯಲ್ಲಿ ಕಂಡು ಬಂದ ಪ್ರತಿಭಟನೆಯನ್ನು ಒಂದು ಮಾತ್ರವಲ್ಲ ವಂದೇ ಮಾತರಂ ಗಾನ ಮಾತ್ರವಾಗಿದೆ ದೇಶೀಯ ಪ್ರಜ್ಞೆಯ ಪ್ರತೀಕವಾಗಿದೆ. ಬ್ರಿಟೀಷರ ಆಡಳಿತ ವಿರುದ್ಧ ದೇಶವನ್ನು ಒಂದುಗೂಡಿಸಿದ ಶಕ್ತಿಯಾಗಿದ್ದು ವಂದೇ ಮಾತರಂ. ವಂದೇ ಮಾತರಂನ ಶಕ್ತಿ ಹಾಗೂ ಇತಿಹಾಸದಲ್ಲಿ ಅದರ ಪಾತ್ರವನ್ನು ಹೊಸ ತಲೆಮಾರು ತಿಳಿದುಕೊಳ್ಳಬೇಕೆಂದು ರಾಜ್ಯಪಾಲರು ನುಡಿದರು.
ಸಾಹಿತ್ಯ ಅಕಾಡೆಮಿ ಅಡ್ವೈಸರಿ ಬೋರ್ಡ್ ಕನ್ವೀನರ್ ಕೆ.ಪಿ. ರಾಮನುಣ್ಣಿ ಸಮಾರೋಪ ಸಂದೇಶ ನೀಡಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಪವನ್‌ಪುತ್ರ ಬಾದಲ್ ಅಧ್ಯಕ್ಷತೆ ವಹಿಸಿದರು. ಕೇರಳ ಕೇಂದ್ರ ವಿ.ವಿಯ ವೈಸ್ ಚಾನ್ಸೆಲರ್ ಪ್ರೊ. ಸಿದ್ದು ಪಿ. ಅಲ್ಲೂರ್, ಪ್ರೊ. ಸುನೈನ ಸಿಂಗ್, ಸ್ನೇಹ ಚೌದರಿ ಮಾತನಾಡಿದರು.





